ವಿಂಡೀಸ್ ತಂಡದಲ್ಲಿ ಗೇಲ್ ಗೆ ಸ್ಥಾನ
ಭಾರತ ವಿರುದ್ಧದ ಏಕದಿನ ಸರಣಿ
ಗಯಾನ, ಜು.26: ಭಾರತ ವಿರುದ್ಧದ ಏಕದಿನ ಸರಣಿಗೆ ವೆಸ್ಟ್ಇಂಡೀಸ್ ತಂಡದಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಸ್ಥಾನ ಪಡೆದಿದ್ದಾರೆ.
14 ಸದಸ್ಯರ ವೆಸ್ಟ್ಇಂಡೀಸ್ ತಂಡವನ್ನು ಇಂದು ಆಯ್ಕೆ ಮಾಡಲಾಗಿದ್ದು, ಆರಂಭಿಕ ದಾಂಡಿಗ ಜೋನ್ ಕ್ಯಾಂಪ್ಬೆಲ್, ಆಲ್ರೌಂಡರ್ ರೋಸ್ಟನ್ ಚೇಸ್ ಮತ್ತು ಕೀಮೊ ಪಾಲ್ರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
ಸುನೀಲ್ ಅಂಬ್ರಿಸ್, ಡರೆನ್ ಬ್ರಾವೊ, ಶಾನೊನ್ ಗ್ಯಾಬ್ರಿಯೆಲ್ ಮತ್ತು ಆಶ್ಲೆ ನರ್ಸ್ರನ್ನು ತಂಡದಿಂದ ಕೈ ಬಿಡಲಾಗಿದೆ. ವಿಶ್ವಕಪ್ ವೇಳೆ ತಂಡದಿಂದ ಹೊರಗುಳಿದಿದ್ದ ಆ್ಯಂಡ್ರೆ ರಸೆಲ್ ತಂಡದಲ್ಲಿ ಅವಕಾಶ ಪಡೆದಿಲ್ಲ.
ಕ್ರಿಸ್ ಗೇಲ್ಗೆ ಏಕದಿನ ಕ್ರಿಕೆಟ್ನಲ್ಲಿ ವೆಸ್ಟ್ಇಂಡೀಸ್ನ ಬ್ರಿಯಾನ್ ಲಾರಾ ದಾಖಲೆ ಸರಿಗಟ್ಟಲು ಇನ್ನು 11 ರನ್ ಗಳಿಸಬೇಕಾಗಿದೆ. ಗೇಲ್ ಈಗ 10,338 ರನ್ ಗಳಿಸಿದ್ದಾರೆ.
ಪ್ರಥಮ ಏಕದಿನ ಪಂದ್ಯವನ್ನು ಆ.8ರಂದು ಆಡಲಾಗುತ್ತಿದೆ. ವೆಸ್ಟ್ಇಂಡೀಸ್: ಜಾಸನ್ ಹೋಲ್ಡರ್(ನಾಯಕ), ಜೋನ್ ಕ್ಯಾಂಪ್ಬೆಲ್, ಎವಿನ್ ಲೆವಿಸ್, ಶಿಮ್ರಾನ್ ಹೆಟ್ಮೆಯರ್, ನಿಕೊಲಾಸ್ ಪೂರನ್, ರಾಸ್ಟನ್ ಚೇಸ್, ಫ್ಯಾಬಿಯಾನ ಆ್ಯಲನ್, ಕಾರ್ಲೊಸ್ ಬ್ರಾಥ್ವೇಟ್, ಕೀಮೊ ಪಾಲ್, ಕ್ರಿಸ್ ಗೇಲ್, ಶೆಲ್ಡಾನ್ ಕೊಟ್ರೆಲ್, ಒಶಾನೆ ಥಾಮಸ್, ಶಾಹಿ ಹೋಪ್, ಕೇಮರ್ ರೋಚ್.