ಮೂರನೇ ಕ್ರಮಾಂಕದಲ್ಲಿ ರೂಟ್
ಆ್ಯಶಸ್ ಸರಣಿಯ ಮೊದಲ ಪಂದ್ಯ
ಬರ್ಮಿಂಗ್ಹ್ಯಾಮ್, ಜು.30: ಆಸ್ಟ್ರೇಲಿಯ ವಿರುದ್ಧ ಆ್ಯಶಸ್ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ನಾಯಕ ಜೋ ರೂಟ್ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು ಇಂಗ್ಲೆಂಡ್ ಬ್ಯಾಟ್ಸ್ಮನ್ ಜೋ ಡೆನ್ಲಿ ಮಂಗಳವಾರ ದೃಢಪಡಿಸಿದ್ದಾರೆ.
ನಾನು ನಾಲ್ಕನೇ ಕ್ರಮಾಂಕದಲ್ಲಿ ಆಡುವೆ ಎಂದು ರೂಟ್ ಈ ಹಿಂದೆ ಸ್ಪಷ್ಟಪಡಿಸಿದ್ದರು. ಕಳೆದ ವಾರ ಐರ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ತನ್ನ ತಂಡದ ಕೋಚ್ ಟ್ರೆವರ್ ಬೆಲಿಸ್ರನ್ನು ಭೇಟಿಯಾದ ರೂಟ್ ಗುರುವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಲು ಸಮ್ಮತಿ ಸೂಚಿಸಿದ್ದರು. ಇಂಗ್ಲೆಂಡ್ನ ಶ್ರೇಷ್ಠ ಬ್ಯಾಟ್ಸ್ಮನ್ ಆಗಿರುವ ರೂಟ್ ಮೂರನೇ ಕ್ರಮಾಂಕದಲ್ಲಿ ಆಡಬೇಕೆನ್ನುವುದು ಕೋ್ ಬೆಲಿಸ್ ದೀರ್ಘಕಾಲದ ಬಯಕೆಯಾಗಿತ್ತು.
Next Story