ಐಸಿಸಿ ಟೆಸ್ಟ್ ರ್ಯಾಂಕಿಂಗ್: ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯ
ಹೊಸದಿಲ್ಲಿ, ಮೇ 3: ಐಸಿಸಿ ಟೆಸ್ಟ್ ತಂಡಗಳ ರ್ಯಾಂಕಿಂಗ್ನಲ್ಲಿ ಭಾರತ ತಂಡ ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಕ್ಕಿಂತ ಆರು ಅಂಕದಿಂದ ಹಿಂದುಳಿದಿದೆ.
ಪಾಕಿಸ್ತಾನ ತಂಡ ಮೂರನೆ ಸ್ಥಾನದಲ್ಲಿದೆ. ಶ್ರೀಲಂಕಾದ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿರುವ ಆಸ್ಟ್ರೇಲಿಯ ತಂಡ ಭಾರತಕ್ಕಿಂತ ಮತ್ತಷ್ಟು ಹೆಚ್ಚು ಮುನ್ನಡೆ ಸಾಧಿಸುವ ಸಾಧ್ಯತೆಯಿದೆ.
ಇದೇ ವೇಳೆ ಭಾರತ ತಂಡ ವೆಸ್ಟ್ಇಂಡೀಸ್ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಪಾಕಿಸ್ತಾನ ತಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಇಂಗ್ಲೆಂಡ್ಗೆ ಪ್ರವಾಸ ಕೈಗೊಳ್ಳಲಿದೆ.
ಐಸಿಸಿ ಬಿಡುಗಡೆ ಮಾಡಿರುವ ಹೊಸ ರ್ಯಾಂಕಿಂಗ್ನಲ್ಲಿ ಆಸ್ಟ್ರೇಲಿಯ 118 ಅಂಕಗಳನ್ನು ಹೊಂದಿದ್ದರೆ, ಭಾರತ(112), ಪಾಕಿಸ್ತಾನ(111), ಇಂಗ್ಲೆಂಡ್(105), ನ್ಯೂಝಿಲೆಂಡ್(98), ದಕ್ಷಿಣ ಆಫ್ರಿಕ(92), ಶ್ರೀಲಂಕಾ(88), ವೆಸ್ಟ್ಇಂಡೀಸ್(65) ಹಾಗೂ ಬಾಂಗ್ಲಾದೇಶ(57) ಬಳಿಕದ ಸ್ಥಾನದಲ್ಲಿವೆ.
Next Story