ಜೂನ್ಗೆ ಭಾರತ ತಂಡದಿಂದ ಝಿಂಬಾಬ್ವೆ ಪ್ರವಾಸ
ಹರಾರೆ, ಮೇ 3: ಝಿಂಬಾಬ್ವೆ ಭಾರತದ ವಿರುದ್ಧ ಜೂನ್ನಲ್ಲಿ ಏಕದಿನ ಹಾಗೂ ಟ್ವೆಂಟಿ-20 ಸರಣಿಯ ಆತಿಥ್ಯವಹಿಸಿಕೊಳ್ಳಲಿದೆ ಎಂದು ಝಿಂಬಾಬ್ವೆ ಕ್ರಿಕೆಟ್ ಮಂಡಳಿ ಮಂಗಳವಾರ ತಿಳಿಸಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಜೂ.11 ರಿಂದ 15ರ ತನಕ ಹಾಗೂ ಮೂರು ಪಂದ್ಯಗಳ ಟ್ವೆಂಟಿ-20 ಸರಣಿ ಜೂ.18 ರಿಂದ 22ರ ತನಕ ನಡೆಯಲಿದೆ.
2010ರ ನಂತರ ಭಾರತ ತಂಡ ಮೂರು ಬಾರಿ ಝಿಂಬಾಬ್ವೆಗೆ ಪ್ರವಾಸ ಕೈಗೊಂಡಿದೆ. ಮೂರು ಬಾರಿಯೂ ಸೀಮಿತ ಓವರ್ಗಳ ಸರಣಿಯನ್ನು ಆಡಿದೆ
Next Story