ಕೊನೆಗೂ ಗೆದ್ದ ತೆಲುಗು ಟೈಟಾನ್ಸ್
ಮುಂಬೈ, ಆ.2: ಸತತ ನಾಲ್ಕು ಸೋಲಿನಿಂದ ಕಂಗಾಲಾಗಿದ್ದ ತೆಲುಗು ಟೈಟಾನ್ಸ್ ತಂಡ 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ಕೊನೆಗೂ ಗೆಲುವಿನ ಮುಖ ಕಂಡಿದೆ. ಇಲ್ಲಿ ಶುಕ್ರವಾರ ನಡೆದ ಲೀಗ್ನ 21ನೇ ಪಂದ್ಯದಲ್ಲಿ ಟೈಟಾನ್ಸ್ ತಂಡ ಯುಪಿ ಯೋಧಾ ತಂಡವನ್ನು 20-19 ಅಂತರದಿಂದ ರೋಚಕವಾಗಿ ಮಣಿಸಿತು. ಟೈಟಾನ್ಸ್ ಪರ ಸಿದ್ದಾರ್ಥ್ ದೇಸಾಯಿ 5 ಅಂಕ ಗಳಿಸಿದರು. ಅಮಿತ್, ಶ್ರೀಕಾಂತ್ ಜಾಧವ್ ಹಾಗೂ ನಿತೀಶ್ ಕುಮಾರ್ ತಲಾ 4 ಅಂಕ ಗಳಿಸಿ ಯೋಧಾ ತಂಡ ಕೊನೆಯ ತನಕ ಹೋರಾಡಲು ನೆರವಾದರು.
ಲೀಗ್ನಲ್ಲಿ 4ನೇ ಪಂದ್ಯ ಆಡಿದ ಯೋಧಾ ತಂಡ 3ನೇ ಸೋಲುಂಡಿದೆ.
Next Story