ನನ್ನ ವಿವಾಹಕ್ಕೆ ಭಾರತೀಯ ಕ್ರಿಕೆಟಿಗರನ್ನು ಆಹ್ವಾನಿಸುವೆ: ಪಾಕ್ ಬೌಲರ್ ಹಸನ್ ಅಲಿ
ಕರಾಚಿ, ಆ.5: ದುಬೈನಲ್ಲಿ ಸೆಪ್ಟಂಬರ್ 20ರಂದು ಭಾರತದ ಪ್ರಜೆ ಸಮಿಯಾ ಅರ್ಝೂ ಅವರೊಂದಿಗೆ ನಡೆಯುವ ನನ್ನ ವಿವಾಹಕ್ಕೆ ಭಾರತದ ಕ್ರಿಕೆಟ್ ಆಟಗಾರರನ್ನು ಆಹ್ವಾನಿಸುತ್ತೇನೆ ಎಂದು ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ ಹೇಳಿದ್ದಾರೆ. ತನ್ನ ಆಹ್ವಾನಿತರ ಪಟ್ಟಿಯಲ್ಲಿ ಭಾರತದ ಯಾವ ಆಟಗಾರರಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲು ನಿರಾಕರಿಸಿದ ಅಲಿ, ನಾನು ಆಹ್ವಾನ ನೀಡಲಿರುವ ಆಟಗಾರ ಬಂದರೆ ತುಂಬಾ ಸಂತೋಷವಾಗುತ್ತದೆ ಎಂದರು.
‘‘ನನ್ನ ಮದುವೆ ಸಮಾರಂಭಕ್ಕೆ ಬರುವಂತೆ ಭಾರತೀಯ ಕ್ರಿಕೆಟ್ ತಂಡ ಹಾಗೂ ಆಟಗಾರರನ್ನು ಆಹ್ವಾನಿಸುವೆ. ಅಷ್ಟಕ್ಕೂ ನಾವೆಲ್ಲರೂ ಕ್ರಿಕೆಟಿಗರಾಗಿದ್ದೇವೆ. ದುಬೈನಲ್ಲಿ ನಡೆಯುವ ನನ್ನ ವಿವಾಹಕ್ಕೆ ಭಾರತೀಯ ಆಟಗಾರರು ಬಂದರೆ ನನಗೆ ತುಂಬಾ ಖುಷಿಯಾಗುತ್ತದೆ. ಭಾರತ-ಪಾಕ್ ಕ್ರಿಕೆಟ್ ತಂಡದ ಮಧ್ಯೆ ಮೈದಾನದ ಒಳಗೆ ಸ್ಪರ್ಧೆ ಇರುತ್ತದೆ. ಮೈದಾನದ ಹೊರಗೆ ಇರಲಾರದು. ನಾವೆಲ್ಲರೂ ವೃತ್ತಿಪರ ಕ್ರಿಕೆಟಿಗರು.ಸಂತೋಷವನ್ನು ಪರಸ್ಪರ ಹಂಚಿಕೊಳ್ಳಬೇಕಾಗಿದೆ’’ ಎಂದರು.
ಸಮಿಯಾ ಭಾರತದ ವಿಶ್ವವಿದ್ಯಾನಿಲಯಯೊಂದರಲ್ಲಿ ಏರೋನಾಟಿಕ್ಸ್ನಲ್ಲಿ ಪದವಿ ಪಡೆದಿದ್ದಾರೆ. ದುಬೈನಲ್ಲಿ ನೆಲೆಸಿರುವ ಸಮಿಯಾ ಅವರ ಕುಟುಂಬ ಸದಸ್ಯರು ಹೊಸದಿಲ್ಲಿಯಲ್ಲಿದ್ದಾರೆ.