ಟೊರಾಂಟೊ ಓಪನ್: ಸೆರೆನಾ-ಒಸಾಕಾ ಮುಖಾಮುಖಿ
ಟೊರಾಂಟೊ, ಆ. 9: ಸೆರೆನಾ ವಿಲಿಯಮ್ಸ್ ಮತ್ತು ಜಪಾನ್ನ ನವೊಮಿ ಒಸಾಕಾ ಡಬ್ಲುಟಿಎ ಟೊರಾಂಟೊ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಹಾಲಿ ಯುಎಸ್ ಮತ್ತು ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಒಸಾಕಾ ಮತ್ತು ಸೆರೆನಾ ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ. ಕಳೆದ ಯುಎಸ್ ಓಪನ್ನ ಫೈನಲ್ನಲ್ಲಿ ಒಸಾಕಾ ಅವರು ಸೆರೆನಾ ವಿಲಿಯಮ್ಸ್ರನ್ನು 6-2, 6-4 ನೇರ ಸೆಟ್ಗಳ ಅಂತರದಲ್ಲಿ ಮಣಿಸಿ ಯುಎಸ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ಒಸಾಕಾ ಅವರು ಪೊಲೆಂಡ್ನ ಐಗಾ ಸ್ವೀಯಾಟೆಕ್ರನ್ನು 7-6(7/4), 6-4 ಅಂತರದಲ್ಲಿ ಬಗ್ಗು ಬಡಿದರು. ಇದೇ ವೇಳೆ ಸೆರೆನಾ ಅವರು ರಶ್ಯದ ಎಕಟೆರಿನಾ ಅಲೆಕ್ಸಾಂಡ್ರೊವಾ ಅವರನ್ನು 7-5. 6-4 ಅಂತರದಲ್ಲಿ ಮಣಿಸಿದರು.
Next Story