ಪ್ರೊ ಕಬಡ್ಡಿ ಲೀಗ್: ವಾರಿಯರ್ಸ್-ಟೈಟಾನ್ಸ್ ಪಂದ್ಯ ರೋಚಕ ಡ್ರಾ
ಅಹ್ಮದಾಬಾದ್, ಆ.12: ಪ್ರೊ ಕಬಡ್ಡಿ ಲೀಗ್ನಲ್ಲಿ ಸೋಮವಾರ ಬಂಗಾಳ ವಾರಿಯರ್ಸ್ ಹಾಗೂ ತೆಲುಗು ಟೈಟಾನ್ಸ್ ಮಧ್ಯೆ ನಡೆದ 38ನೇ ಲೀಗ್ ಪಂದ್ಯ 29-29 ಅಂಕಗಳ ಅಂತರದಿಂದ ರೋಚಕ ಡ್ರಾನಲ್ಲಿ ಕೊನೆಗೊಂಡಿದೆ.
ಟೈಟಾನ್ಸ್ ತಂಡ ಈ ಋತುವಿನಲ್ಲಿ ಎರಡನೇ ಬಾರಿ ಡ್ರಾ ಸಾಧಿಸಿತು.
ಪ್ರತಿ ಕ್ಷಣವೂ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಬಂಗಾಳದ ಪರ ನಬೀಬ್ಬಕ್ಷ್ 8 ಹಾಗೂ ಮಣಿಂದರ್ ಸಿಂಗ್ 5 ಅಂಕ ಗಳಿಸಿದರು. ಟೈಟಾನ್ಸ್ ಪರ ಸೂರಜ್ ದೇಸಾಯಿ 7 ಹಾಗೂ ಸಿದ್ದಾರ್ಥ್ ದೇಸಾಯಿ 4 ಅಂಕ ಕಲೆ ಹಾಕಿದರು.
Next Story