ಭಾರತದ ಸಾಯಿ ಪ್ರಣೀತ್, ಪ್ರಣಯ್ ಶುಭಾರಂಭ
ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್
ಹೊಸದಿಲ್ಲಿ, ಆ.19: ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ದ್ವಿತೀಯ ಸುತ್ತಿಗೆ ಲಗ್ಗೆ ಇಟ್ಟಿರುವ ಸಾಯಿ ಪ್ರಣೀತ್ ಹಾಗೂ ಎಚ್.ಎಸ್. ಪ್ರಣಯ್ ಶುಭಾರಂಭ ಮಾಡಿದ್ದಾರೆ.
39 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಣೀತ್ಕೆನಡಾದ ಜೇಸನ್ ಅಂಥೋನಿ ಅವರನ್ನು 21-17, 21-16 ನೇರ ಗೇಮ್ಗಳಿಂದ ಮಣಿಸಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು.
ಮತ್ತೊಂದು ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.30ನೇ ಆಟಗಾರ ಪ್ರಣಯ್ 93ನೇ ರ್ಯಾಂಕಿನ ಫಿನ್ಲ್ಯಾಂಡ್ನ ಎಟು ಹಿನೊರನ್ನು 17-21, 21-10, 21-11 ಗೇಮ್ಗಳ ಅಂತರದಿಂದ ಸೋಲಿಸಿದರು. 2017ರ ಸಿಂಗಾಪುರ ಓಪನ್ ಚಾಂಪಿಯನ್ ಪ್ರಣೀತ್ ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಲು ಪರದಾಟ ನಡೆಸಿದರು.ಪಂದ್ಯ ಮಧ್ಯಂತರ ತಲುಪಿದಾಗ 4 ಅಂಕ ಮುನ್ನಡೆ ಪಡೆದರು. ತನ್ನ ಅನುಭವವನ್ನು ಚೆನ್ನಾಗಿ ಬಳಸಿಕೊಂಡ ಸಾಯ್ 18 ನಿಮಿಷಗಳಲ್ಲಿ ಮೊದಲ ಗೇಮ್ನ್ನು ಗೆದ್ದುಕೊಂಡರು.
ಭಾರತದ ಶಟ್ಲರ್ 2ನೇ ಗೇಮ್ನ್ನು ಭಾರೀ ಆತ್ಮವಿಶ್ವಾಸದೊಂದಿಗೆ ಆರಂಭಿಸಿದರು. ಆದರೆ, ಅನಗತ್ಯ ತಪ್ಪೆಸಗಿ ಅಂಕವನ್ನು ಬಿಟ್ಟುಕೊಟ್ಟ ಹೊರತಾಗಿಯೂ 21-16 ಅಂತರದಿಂದ ಜಯ ಸಾಧಿಸಿದರು. 16ನೇ ಶ್ರೇಯಾಂಕದ ಪ್ರಣೀತ್ ಮುಂದಿನ ಸುತ್ತಿನಲ್ಲಿ ಲೀಡ್ ಡಾಂಗ್ ಕೆಯುನ್ ಅಥವಾ ಡೇನಿಯಲ್ ಫಾನ್ರನ್ನು ಎದುರಿಸಲಿದ್ದಾರೆ.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತ ಉತ್ತಮ ಆರಂಭ ಪಡೆದಿದೆ. ಮೇಘನಾ ಜಕ್ಕಂಪುಡಿ ಹಾಗೂ ಪೂರ್ವಿಶಾ ರಾಮ್ ಜೋಡಿ ಗ್ವಾಟೆಮಾಲಾದ ಡಯಾನ ಕಾರ್ಲೆಟೊ ಸೊಟೊ ಹಾಗೂ ನಿಕ್ಟೆ ಅಲೆಜಾಂಡ್ರಾ ಸೊಟೊಮಯೊರ್ರನ್ನು 21-10 ಹಾಗೂ 21-18 ಸೆಟ್ಗಳ ಅಂತರದಿಂದ ಮಣಿಸಿದರು.