ಇಂಗ್ಲೆಂಡ್ - ಆಸ್ಟ್ರೇಲಿಯ ದ್ವಿತೀಯ ಆ್ಯಶಸ್ ಟೆಸ್ಟ್ ಡ್ರಾ | Vartha Bharati- ವಾರ್ತಾ ಭಾರತಿ

---

ಇಂಗ್ಲೆಂಡ್ - ಆಸ್ಟ್ರೇಲಿಯ ದ್ವಿತೀಯ ಆ್ಯಶಸ್ ಟೆಸ್ಟ್ ಡ್ರಾ

ಲಾರ್ಡ್ಸ್, ಆ.19: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಆ್ಯಶಸ್ ಸರಣಿಯ ದ್ವಿತೀಯ ಟೆಸ್ಟ್ ಡ್ರಾನಲ್ಲಿ ಕೊನೆಗೊಂಡಿದೆ.

 ಟೆಸ್ಟ್‌ನ ಐದನೇ ಹಾಗೂ ಅಂತಿಮ ದಿನವಾಗಿರುವ ರವಿವಾರ ಗೆಲುವಿಗೆ ಎರಡನೇ ಇನಿಂಗ್ಸ್ ನಲ್ಲಿ 267 ರನ್ ಗಳಿಸಬೇಕಿದ್ದ ಆಸ್ಟ್ರೇಲಿಯ 47.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 154 ರನ್ ಗಳಿಸಿತು. ಮಳೆ ಅಂತಿಮ ದಿನದ ಆಟಕ್ಕ್ಕೂ ಅಡ್ಡಿಪಡಿಸಿತು.

ಜೋಫ್ರಾ ಆರ್ಚರ್ ದಾಳಿಗೆ ಸಿಲುಕಿದ ಆಸ್ಟ್ರೇಲಿಯದ ಬ್ಯಾಟಿಂಗ್ ಸೊರಗಿತ್ತು. ಮಾರ್ನಸ್ ಲ್ಯಾಬುಸ್ಚಾಗ್ನೆ ಅರ್ಧಶತಕ(59) ಮತ್ತು ಟ್ರಾವಿಸ್ ಹೆಡ್ 42 ರನ್ ಗಳಿಸಿರುವುದು ಆಸ್ಟ್ರೇಲಿಯದ ಪರ ಎರಡನೇ ಇನಿಂಗ್ಸ್‌ನಲ್ಲಿ ದಾಖಲಾಗಿರುವ ಗರಿಷ್ಠ ಸ್ಕೋರ್. ಮಾರ್ನಸ್ ಅವರು ಸ್ಮಿತ್ ಬದಲಿಗೆ ಆಡಿದ್ದರು. ಇವರು ಆಸ್ಟ್ರೇಲಿಯವನ್ನು ಸಂಕಷ್ಟದಿಂದ ಪಾರು ಮಾಡಿದರು,

  

ಶನಿವಾರ ಪಂದ್ಯದ ನಾಲ್ಕನೇ ದಿನ ಚೊಚ್ಚಲ ಟೆಸ್ಟ್ ಆಡಿದ ಆರ್ಚರ್ ಬೌನ್ಸರ್ ಎಸೆತದಲ್ಲಿ ಚೆಂಡು ಸ್ಮಿತ್ ಕುತ್ತಿಗೆಗೆ ಬಡಿದಿತ್ತು. ಗಾಯಗೊಂಡಿದ್ದ ಸ್ಮಿತ್ ಅಂತಿಮ ದಿನ ಹೊರಗುಳಿದಿದ್ದರು. ಸ್ಮಿತ್ ಬದಲಿಗೆ ಬ್ಯಾಟಿಂಗ್ ನಡೆಸಿದ ಮಾರ್ನುಸ್ ಅವರ ಹೆಲ್ಮೆಟ್‌ಗೆ ಆರ್ಚರ್ ಎಸೆತದಲ್ಲಿ ಚೆಂಡು ಬಡಿಯಿತು. ಆದರೆ 25ರ ಹರೆಯದ ಎಡಗೈ ದಾಂಡಿಗ ಮಾರ್ನಸ್ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದರು. ತನ್ನ ಆರನೇ ಟೆಸ್ಟ್ ಪಂದ್ಯದಲ್ಲಿ ಎರಡನೇ ಅರ್ಧಶತಕ ದಾಖಲಿಸಿದರು. ಅವರು 100 ಎಸೆತಗಳನ್ನು ಎದುರಿಸಿ 8 ಬೌಂಡರಿಗಳ ಸಹಾಯದಿಂದ 59 ರನ್ ಸೇರಿಸಿದರು. ಜಾಕ್ ಲೀಚ್ ಎಸೆತದಲ್ಲಿ ಜೋ ರೂಟ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಕ್ಯಾಮರೂನ್ ಬ್ಯಾಂಕ್ರಾಫ್ಟ್ 16 ರನ್, ಡೇವಿಡ್ ವಾರ್ನರ್ 5ರನ್, ಉಸ್ಮಾನ್ ಖ್ವಾಜಾ 2 ರನ್, ಮ್ಯಾಥ್ಯೂ ವೇಡ್ 1ರನ್, ಟಿಮ್ ಪೈನ್ 4 ರನ್ ಮತ್ತು ಪ್ಯಾಟ್ ಕಮಿನ್ಸ್ ಔಟಾಗದೆ 1 ರನ್ ಗಳಿಸಿದರು.

ಇಂಗ್ಲೆಂಡ್‌ನ ಆರ್ಚರ್ 32ಕ್ಕೆ 3 ಮತ್ತು ಜಾಕ್ ಲೀಚ್ 37ಕ್ಕೆ 3 ವಿಕೆಟ್ ಪಡೆದರು.

 ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 71 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 258 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಬೆನ್ ಸ್ಟೋಕ್ಸ್ ಔಟಾಗದೆ 115 ರನ್ (165ಎ, 11ಬೌ,3ಸಿ) ಗಳಿಸಿದರು. ನಾಲ್ಕನೇ ದಿನದಾಟದಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 32.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 96 ರನ್ ಗಳಿಸಿದ್ದ ಇಂಗ್ಲೆಂಡ್ ಅಂತಿಮ ದಿನ ಈ ಮೊತ್ತಕ್ಕೆ 162 ರನ್ ಸೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಸ್ಟೋಕ್ಸ್ 54ನೇ ಟೆಸ್ಟ್‌ನಲ್ಲಿ 7ನೇ ಶತಕ ದಾಖಲಿಸಿದರು.

ಸಂಕ್ಷಿಪ್ತ ಸ್ಕೋರ್

► ಇಂಗ್ಲೆಂಡ್ ಮೊದಲ ಇನಿಂಗ್ಸ್ 258

► ಆಸ್ಟ್ರೇಲಿಯ ಮೊದಲ ಇನಿಂಗ್ಸ್ 250

► ಇಂಗ್ಲೆಂಡ್ ಎರಡನೇ ಇನಿಂಗ್ಸ್ 71 ಓವರ್‌ಗಳಲ್ಲಿ 258/5 (ಸ್ಟೋಕ್ಸ್ ಔಟಾಗದೆ 115, ಬಟ್ಲರ್ 31, ಬೈರ್‌ಸ್ಟೋವ್ ಔಟಾಗದೆ 30; ಕಮಿನ್ಸ್ 35ಕ್ಕೆ3)

► ಆಸ್ಟ್ರೇಲಿಯ ಎರಡನೇ ಇನಿಂಗ್ಸ್ 47.3 ಓವರ್‌ಗಳಲ್ಲಿ 154/6 (ಮಾರ್ನಸ್ ಲ್ಯಾಬುಸ್ಚಾಗ್ನೆ 59,ಟ್ರಾವಿಸ್ ಹೆಡ್ 42;ಆರ್ಚರ್ 32ಕ್ಕೆ 3 ,ಜಾಕ್ ಲೀಚ್ 37ಕ್ಕೆ 3 ).

► ಪಂದ್ಯಶ್ರೇಷ್ಠ : ಬೆನ್ ಸ್ಟೋಕ್ಸ್.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top