ವಾರಿಯರ್ಸ್ ಗೆಲುವಿನ ಓಟ ಅಬಾಧಿತ
ಪ್ರೊ ಕಬಡ್ಡಿ ಲೀಗ್
ಚೆನ್ನೈ, ಆ.22: ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ಬಂಗಾಳ ವಾರಿಯರ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಪಾಟ್ನಾ ಪೈರೇಟ್ಸ್ ತಂಡವನ್ನು 35-26 ಅಂಕಗಳ ಅಂತರದಿಂದ ಮಣಿಸಿತು.
ಇಲ್ಲಿನ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ 53ನೇ ಪಂದ್ಯದಲ್ಲಿ ವಾರಿಯರ್ಸ್ ಪರ ಮಣಿಂದರ್ ಸಿಂಗ್ 10, ಪ್ರಪಂಜನ್ 6 ಹಾಗೂ ರಿಂಕು ನರ್ವಾಲ್ 5 ಅಂಕ ಗಳಿಸಿ ತಂಡದ ಗೆಲುವಿಗೆ ನೆರವಾದರು. ಪಾಟ್ನಾ ಪರ ನಾಯಕ ಪರ್ದೀಪ್ ನರ್ವಾಲ್ 12 ಅಂಕ ಗಳಿಸಿ ಏಕಾಂಗಿ ಹೋರಾಟ ನೀಡಿದರು.
ಟೂರ್ನಿಯಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ ಪಾಟ್ನಾ ತಂಡ ಇಂದು ತಾನಾಡಿದ 8ನೇ ಪಂದ್ಯದಲ್ಲಿ 6ನೇ ಸೋಲು ಕಂಡಿತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರಿದೆ. ಮತ್ತೊಂದೆಡೆ, 9ನೇ ಪಂದ್ಯದಲ್ಲಿ 5ನೇ ಗೆಲುವು ದಾಖಲಿಸಿದ ವಾರಿಯರ್ಸ್ ಒಟ್ಟು 33 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ವಾರಿಯರ್ಸ್ 2 ಪಂದ್ಯದಲ್ಲಿ ಸೋಲು ಹಾಗೂ ಇನ್ನೆರಡು ಪಂದ್ಯಗಳಲ್ಲಿ ಟೈ ಸಾಧಿಸಿದೆ.
Next Story