ದಾಖಲೆ 24ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ನಿರೀಕ್ಷೆಯಲ್ಲಿ ಸೆರೆನಾ
ಇಂದಿನಿಂದ ಅಮೆರಿಕನ್ ಓಪನ್ ಟೆನಿಸ್ ಟೂರ್ನಿ
ನ್ಯೂಯಾರ್ಕ್, ಆ.25: ಈ ವರ್ಷದ ಕೊನೆಯ ಗ್ರಾನ್ಸ್ಲಾಮ್ ಟೂರ್ನಿ ಅಮೆರಿಕನ್ ಓಪನ್ ಸೋಮವಾರ ಆರಂಭವಾಗಲಿದೆ. ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ತನ್ನ ತವರೂರಿನಲ್ಲಿ 24ನೇ ಗ್ರಾನ್ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದ್ದಾರೆ.
37ರ ಹರೆಯದ ಸೆರೆನಾ ಸೋಮವಾರ ಮಹಿಳೆಯರ ಸಿಂಗಲ್ಸ್ ವಿಭಾಗದ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ರಶ್ಯದ ಮರಿಯಾ ಶರಪೋವಾರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಸೆರೆನಾ ಈ ಬಾರಿ 24ನೇ ಗ್ರಾನ್ಸ್ಲಾಮ್ ಪ್ರಶಸ್ತಿ ಜಯಿಸಲು ಸಫಲರಾದರೆ ಮಾರ್ಗರೆಟ್ ಕೋರ್ಟ್ ಅವರ ಸಾರ್ವಕಾಲಿಕ ಶ್ರೇಷ್ಠ ದಾಖಲೆಯೊಂದನ್ನು ಸರಿಗಟ್ಟುತ್ತಾರೆ.
ಸೆರೆನಾ-ಶರಪೋವಾ ನಡುವೆ ನಡೆಯುವ ಪಂದ್ಯವನ್ನು ನಾನು ತಪ್ಪದೇ ನೋಡುತ್ತೇನೆ. ನನ್ನ ಪ್ರಕಾರ ನ್ಯೂಯಾರ್ಕ್ನ ಪ್ರತಿಯೊಬ್ಬರೂ ಈ ಪಂದ್ಯವನ್ನು ತಪ್ಪಿಸಿಕೊಳ್ಳಲಾರರು ಎಂದು ಕಳೆದ ವರ್ಷ ಯುಎಸ್ ಓಪನ್ ಫೈನಲ್ನಲ್ಲಿ ಸೆರೆನಾಗೆ ಸೋಲುಣಿಸಿರುವ ಹಾಲಿ ಚಾಂಪಿಯನ್, ಜಪಾನ್ನ ನೊಯೊಮಿ ಒಸಾಕಾ ಹೇಳಿದ್ದಾರೆ.
Next Story