ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮಿಸ್ಬಾವುಲ್ ಹಕ್ ನೇಮಕ
ಲಾಹೋರ್, ಸೆ.4: ಪಾಕಿಸ್ತಾನದ ಪುರುಷರ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಮಿಸ್ಬಾವುಲ್ ಹಕ್ ರನ್ನು ನೇಮಕ ಮಾಡಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಬುಧವಾರ ದೃಢಪಡಿಸಿದೆ.
ಮಿಸ್ಬಾರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸುವ ಮೂಲಕ ಆಟಗಾರರ ಆಯ್ಕೆಯ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಡಲಾಗಿದೆ.
ವಕಾರ್ ಯೂನಿಸ್ ಪಾಕ್ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಮಿಸ್ಬಾ ಹಾಗೂ ವಕಾರ್ ಮೂರು ವರ್ಷಗಳ ಅವಧಿಗೆ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ನೇಮಕಾತಿ ಪ್ರಕ್ರಿಯೆ ನಡೆಸಿಕೊಟ್ಟ ಐವರು ಸದಸ್ಯರುಗಳಿದ್ದ ಪಿಸಿಬಿ ಸಮಿತಿಯು ಮಿಸ್ಬಾರನ್ನು ಅವಿರೋಧವಾಗಿ ಆಯ್ಕೆ ಮಾಡಿತು ಎಂದು ಪಿಸಿಬಿ ತಿಳಿಸಿದೆ.
Next Story