ಭಾರತ 2 ಟೆಸ್ಟ್ಗಳಲ್ಲಿ ಜಯಿಸಿ 120 ಪಾಯಿಂಟ್ಸ್ ಪಡೆಯಿತು .. ಆಸ್ಟ್ರೇಲಿಯ ಎಷ್ಟು ಪಡೆಯಿತು ?
ಮುಂಬೈ, ಸೆ.9: ವೆಸ್ಟ್ಇಂಡಿಸ್ ವಿರುದ್ಧ ಎರಡು ಟೆಸ್ಟ್ಗಳ ಸರಣಿಯಲ್ಲಿ 2ರಲ್ಲಿ ಜಯ ದಾಖಲಿಸಿದ ಟೀಮ್ ಇಂಡಿಯಾಕ್ಕೆ ಟೆಸ್ಟ್ ಚಾಂಪಿಯನ್ನ ಖಾತೆಗೆ 120 ಅಂಕಗಳು ಜಮೆ ಆಗಿದೆ. ಆದರೆ ಆಸ್ಟ್ರೇಲಿಯ ಆ್ಯಶಸ್ ಸರಣಿಯ 2 ಟೆಸ್ಟ್ ಪಂದ್ಯಗಳಲ್ಲಿ ಜಯ ಮತ್ತು 1 ಪಂದ್ಯದಲ್ಲಿ ಡ್ರಾ ಸಾಧಿಸಿದ್ದರೂ 56 ಅಂಕಗಳು ಮಾತ್ರ ಸಿಕ್ಕಿತು ! ಯಾಕೆ ಹೀಗಾಯಿತು ?
ಆ್ಯಶಸ್ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಆಡಲು ಬಾಕಿ ಇದೆ. 4 ಪಂದ್ಯಗಳಲ್ಲಿ 1 ಪಂದ್ಯ ಜಯಿಸಿ ಇನ್ನೊಂದು ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ಇಂಗ್ಲೆಂಡ್ 32 ಪಾಯಿಂಟ್ಸ್ ಪಡೆದಿದೆ. ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯ ಜಯ ಗಳಿಸಿದರೆ ತಂಡದ ಖಾತೆಗೆ ಇನ್ನೂ 24 ಅಂಕಗಳು ಸೇರ್ಪಡೆಯಾಗಲಿದೆ.
ಈಗ ನಡೆಯುತ್ತಿರುವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿನ ಪಾಯಿಂಟ್ಸ್ ಲೆಕ್ಕಾಚಾರ ಇಂತಿವೆ.
2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿದರೆ 120 ಪಾಯಿಂಟ್ಸ್ (60+60), ಟೈಯಾದರೆ ತಲಾ 30 ಮತ್ತು ಡ್ರಾಗೊಂಡರೆ ಉಭಯ ತಂಡಗಳಿಗೆ ತಲಾ 20 ಪಾಯಿಂಟ್ಸ್ ಹಂಚಿಕೆಯಾಗಲಿದೆ.
ಐದು ಪಂದ್ಯಗಳ ಸರಣಿಯಲ್ಲಿ ಎಲ್ಲ ಪಂದ್ಯಗಳನ್ನು ಜಯಿಸಿದರೆ ಆ ತಂಡಕ್ಕೆ 120 ಪಾಯಿಂಟ್ಸ್ ಸಿಗಲಿದೆ. ಒಂದು ಪಂದ್ಯ ಜಯಿಸಿದರೆ 24 ಪಾಯಿಂಟ್ಸ್ ದೊರೆಯಲಿದೆ. 1ಟೈಯಾದರೆ ಉಭಯ ತಂಡಗಳಿಗೆ ತಲಾ 15 ಪಾಂಯಿಟ್ಸ್ ಮತ್ತು 1 ಪಂದ್ಯ ಡ್ರಾಗೊಂಡರೆ ತಲಾ 10 ಅಂಕಗಳು ಉಭಯ ತಂಡಗಳಿಗೆ ದೊರೆಯಲಿದೆ.
ಪಾಯಿಂಟ್ಸ್ ಲೆಕ್ಕಚಾರ
ಸರಣಿಯಲ್ಲಿ ಪಂದ್ಯಗಳು ಜಯ ಟೈ ಡ್ರಾ
2 ಪಂದ್ಯಗಳ ಸರಣಿ 60 30 20
2 ಪಂದ್ಯಗಳ ಸರಣಿ 40 20 13
4 ಪಂದ್ಯಗಳ ಸರಣಿ 30 15 10
5 ಪಂದ್ಯಗಳ ಸರಣಿ 24 12 08