ರಾಷ್ಟ್ರೀಯ ಶೂಟಿಂಗ್ ಟ್ರಯಲ್ಸ್: ಮೆಹುಲಿ ಮೇಲುಗೈ
ಹೊಸದಿಲ್ಲಿ, ಸೆ.11: ಪಶ್ಚಿಮ ಬಂಗಾಳದ ಮಹಿಳಾ ಶೂಟರ್ ಮೆಹುಲಿ ಘೋಷ್ ಇಲ್ಲಿ ನಡೆಯುತ್ತಿರುವ ನ್ಯಾಶನಲ್ ಶೂಟಿಂಗ್ ಟ್ರಯಲ್ಸ್ನ ಸೀನಿಯರ್ ಮತ್ತು ಜೂನಿಯರ್ ವಿಭಾಗದ 10 ಮೀಟರ್ ರೈಫಲ್ನಲ್ಲಿ ಎರಡನೇ ಚಿನ್ನ ಜಯಿಸುವುದರೊಂದಿಗೆ ಮೇಲುಗೈ ಸಾಧಿಸಿದ್ದಾರೆ.
ಡಾ.ಕರ್ಣಿ ಸಿಂಗ್ ಶೂಟಿಂಗ್ ರೆಂಜ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್ ಟ್ರಯಲ್ಸ್ನಲ್ಲಿ (ಟಿ 7) ಬುಧವಾರ ಚಿನ್ನ ಜಯಿಸಿದರು. ನಿನ್ನೆ 6ನೇ ಟ್ರಯಲ್ಸ್ನಲ್ಲಿ ಅವರು ಚಿನ್ನ ಜಯಿಸಿದ್ದರು.
ಕಳೆದ ಎರಡು ವರ್ಷಗಳಿಂದ ಮೆಹುಲಿ 7 ಅಂತರ್ರಾಷ್ಟ್ರೀಯ ಪದಕಗಳನ್ನು ಜಯಿಸಿದ್ದಾರೆ. ಮೆಹುಲಿ ಸೀನಿಯರ್ ಫೈನಲ್ಸ್ನಲ್ಲಿ 251.9 ಪಾಯಿಂಟ್ ದಾಖ ಲಿಸಿ ಚಿನ್ನ ಜಯಿಸಿದರು. ಬಳಿಕ ಜೂನಿಯರ್ ವಿಭಾಗದಲ್ಲಿ 252.7 ಪಾಯಿಂಟ್ ಗಳಿಸಿ ಅಗ್ರ ಸ್ಥಾನ ಪಡೆದರು. ಮೆಹುಲಿ ತಂಡದ ಅಪೂರ್ವಿ ಚಾಂಡೆಲಾ 252.9 ಪಾಯಿಂಟ್ ದಾಖಲಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ವಿಶ್ವದ ನಂ.2 ಅಂಜುಮ್ ವೌದ್ಗಿಲ್ ಮತ್ತು ಅಪೂರ್ವಿ ಸೀನಿಯರ್ ವಿಭಾಗದಲ್ಲಿ ಕ್ರಮವಾಗಿ 4ನೇ ಮತ್ತು 6ನೇ ಸ್ಥಾನ ಗಳಿಸಿದರು.
ಮಧ್ಯಪ್ರದೇಶದ ಶ್ರೇಯಾ ಅಗರವಾಲ್ ಎರಡನೇ ಬಾರಿ ಫೈನಲ್ನಲ್ಲಿ ಮೆಹುಲಿ ವಿರುದ್ಧ ಸೋಲು ಅನುಭವಿಸಿದರು. ನಿನ್ನೆ 6ನೇ ಟ್ರಯಲ್ಸ್ ನಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಇಂದು 7ನೇ ಟ್ರಯಲ್ಸ್ನಲ್ಲಿ 252 ಪಾಯಿಂಟ್ ಗಳಿಸಿ ಮತ್ತೊಮ್ಮೆ ಎರಡನೇ ಸ್ಥಾನ ಪಡೆದರು. ರಿಯೋ ವರ್ಲ್ಡ್ ಕಪ್ನಲ್ಲಿ ಚಿನ್ನ ಜಯಿಸಿದ ಎಲವೆನಿಲ್ ವಲರಿವಾನ್ (251.0) ಸೀನಿಯರ್ ಫೈನಲ್ನಲ್ಲಿ ಎರಡನೇ ಸ್ಥಾನ ಗಳಿಸಿದರು. ಅವರು ಅರ್ಹತಾ ಸುತ್ತಿನಲ್ಲಿ (631.1) ಅಗ್ರಸ್ಥಾನ ಗಳಿಸಿದ್ದರು.