ಪ್ರೊ ಕಬಡ್ಡಿ ಲೀಗ್: ಜೈಪುರ ವಿರುದ್ಧ ಯೋಧಾಕ್ಕೆ ಜಯ
ಪುಣೆ, ಸೆ.16: ಪ್ರೊ ಕಬಡ್ಡಿ ಲೀಗ್ನಲ್ಲಿ ಸೋಮವಾರ ನಡೆದ 93ನೇ ಪಂದ್ಯದಲ್ಲಿ ಯು.ಪಿ.ಯೋಧಾ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 38-32 ಅಂಕಗಳ ಅಂತರದಿಂದ ಮಣಿಸಿದೆ.
ಯೋಧಾ ಪರವಾಗಿ ಕನ್ನಡಿಗ ರಿಶಾಂಕ್ ದೇವಾಡಿಗ 8 ಅಂಕ ಹಾಗೂ ಶ್ರೀಕಾಂತ್ ಜಾಧವ್ 9 ಅಂಕ ಗಳಿಸಿದರು. ಯೋಧಾ ತಂಡ ಲೀಗ್ನಲ್ಲಿ ಆಡಿದ 15ನೇ ಪಂದ್ಯದಲ್ಲಿ 8ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಲು ನೆರವಾದರು. ಯೋಧಾ ತಂಡ ಒಟ್ಟು 47 ಅಂಕ ಗಳಿಸಿದೆ.
ಜೈಪುರದ ಪರವಾಗಿ ದೀಪಕ್ ಹೂಡ 13 ಅಂಕ ಗಳಿಸಿದರು. ತಾನಾಡಿದ 16ನೇ ಪಂದ್ಯದಲ್ಲಿ 8ನೇ ಸೋಲು ಕಂಡಿತು.ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
Next Story