ಟೊಕಿಯೋ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿಕೊಂಡ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್
ನೂರ್ ಸುಲ್ತಾನ್ (ಕಝಕಿಸ್ತಾನ), ಸೆ.18: ಅಗ್ರ ಶ್ರೇಯಾಂಕಿತ ಆಟಗಾರ ಸಾರಾ ಹಿಲ್ಡರ್ಬ್ರಾಂಡ್ ವಿರುದ್ಧ ಬುಧವಾರ ಕಠಿಣ ಜಯ ಸಾಧಿಸಿದ ಭಾರತದ ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್ (53 ಕೆಜಿ) ಅವರು 2020ರಲ್ಲಿ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಫೋಗಾಟ್ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎನಿಸಿಕೊಂಡರು.
ವಿನೇಶ್ ಪೋಗಾಟ್ ಜಪಾನ್ನ ಮಯು ಮುಕೈದಾ ವಿರುದ್ಧ ಮಂಗಳವಾರ ಸೋತಿದ್ದರು. ಈ ಸೋಲು ನೂರ್ ಸುಲ್ತಾನ್ನಲ್ಲಿ ನಡೆಯುತ್ತಿರುವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆಲ್ಲುವ ಭರವಸೆಯನ್ನು ಕೊನೆಗೊಳಿಸಿತು. ಆದರೆ ಕಂಚಿನ ಪದಕಕ್ಕಾಗಿ ಅವರು ಸ್ಪರ್ಧೆಯಲ್ಲಿದ್ದರು.
ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದರುವ ಫೋಗಾಟ್ ಕಂಚಿನ ಪದಕದ ಪಂದ್ಯದಲ್ಲಿ ಗ್ರೀಸ್ನ ಮಾರಿಯಾ ಪ್ರೆವೊಲಾರಕಿಯನ್ನು ಎದುರಿಸಲಿದ್ದಾರೆ, ಅವರು ವಿಶ್ವ ಚಾಂಪಿಯನ್ಶಿಪ್ನಲ್ಲಿ ಮೊದಲ ಪದಕದ ನಿರೀಕ್ಷೆಯಲ್ಲಿದ್ದಾರೆ.
ಸೀಮಾ ಬಿಸ್ಲಾ (50 ಕೆಜಿ) ನೈಜೀರಿಯಾದ ಮಿಸಿನ್ನೆ ಮರ್ಸಿ ಜೆನೆಸಿಸ್ ಅವರ ವಿರುದ್ಧ ರೆಪೆಚೇಜ್ ವಿಭಾಗದಲ್ಲಿ ಸೋಲಿಸಿದ್ದರು. ಆದರೆ ಎಕಟೆರಿನಾ ಪೋಲೆಶ್ಚುಕ್ ವಿರುದ್ಧ ಸೋಲು ಅನುಭವಿಸಿ ಕೂಟದಿಂದ ಹೊರಬಿದ್ದರು.
ಇದೇ ವೇಳೆ ಕಿರಣ್ ಬಿಶ್ನಾಯ್ (76 ಕೆಜಿ) ಯನ್ನು ಜರ್ಮನ್ ಅಲೈನ್ ರೋಟರ್ ಫೋಕೆನ್ ಸೋಲಿಸಿದರೆ, ಸರಿತಾ ಮೊರ್ (57 ಕೆಜಿ) ಯುರೋಪಿಯನ್ ಚಾಂಪಿಯನ್ಶಿಪ್ ಕಂಚಿನ ವಿಜೇತ ಅನಸ್ತಾಸಿಯಾ ನಿಚಿತಾ ವಿರುದ್ಧ ಅರ್ಹತಾ ಸುತ್ತಿನಲ್ಲಿ ಸೋಲನುಭವಿಸಿದರು.