ಬಂಗಾಳ ವಾರಿಯರ್ಸ್ ಜಯಭೇರಿ
ಪ್ರೊ ಕಬಡ್ಡಿ ಲೀಗ್
ಪುಣೆ, ಸೆ.19: ಬಂಗಾಳ ವಾರಿಯರ್ಸ್ ತಂಡ ಗುರುವಾರ ನಡೆದ ಪ್ರೊ ಕಬಡ್ಡಿ ಲೀಗ್ನ 97ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ತಂಡವನ್ನು 48-36 ಅಂಕಗಳ ಅಂತರದಿಂದ ಮಣಿಸಿತು.
ತಾನಾಡಿದ 17ನೇ ಪಂದ್ಯದಲ್ಲಿ 10ನೇ ಜಯ ದಾಖಲಿಸಿದ ವಾರಿಯರ್ಸ್ ಒಟ್ಟು 63 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ವಾರಿಯರ್ಸ್ ಪರ ಮಣಿಂದರ್ ಸಿಂಗ್ 18 ಅಂಕ ಗಳಿಸಿದರು.
16 ಪಂದ್ಯಗಳಲ್ಲಿ 5ನೇ ಸೋಲು ಕಂಡಿರುವ ಹರ್ಯಾಣ ಸ್ಟೀಲರ್ಸ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ವಿನಯ್ 14 ಹಾಗೂ ವಿಕಾಶ್ 9 ಅಂಕ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ವಿಫಲರಾದರು.
Next Story