400 ಮೀ.ಓಟದಲ್ಲಿ ಅನಸ್ ಸ್ಪರ್ಧೆಯಿಲ್ಲ!
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್
ಹೊಸದಿಲ್ಲಿ, ಸೆ.20: ಮುಹಮ್ಮದ್ ಅನಸ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ವೈಯಕ್ತಿಕ 400 ಮೀ.ಓಟದಲ್ಲಿ ಭಾಗವಹಿಸುವುದಿಲ್ಲ. ಈ ಸ್ಪರ್ಧೆಗೆ ಅನಸ್ ಅರ್ಹತೆ ಪಡೆದಿದ್ದರೂ ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಅನಸ್ ಹೆಸರನ್ನು ಗಣನೆಗೆ ತೆಗೆದುಕೊಂಡಿಲ್ಲ. ಅನಸ್ ಪುರುಷರ 4x400 ಮೀ.ರಿಲೇ ಹಾಗೂ 4x400 ಮಿ. ಮಿಕ್ಸೆಡ್ ರಿಲೇಯಲ್ಲಿ ಮಾತ್ರ ಸ್ಪರ್ಧಿಸಲಿದ್ದಾರೆ.
ವೈಯಕ್ತಿಕ 400 ಮೀ.ಓಟದ ಸ್ಪರ್ಧೆಯಿಂದ ಅನಸ್ರಿಂದ ಹೊರಗಿಟ್ಟಿರುವುದು ಆಘಾತಕಾರಿ ಹೆಜ್ಜೆಯಾಗಿದೆ. ಕೇರಳದ ಓಟಗಾರ ಪ್ರಸ್ತುತ ಉತ್ತಮ ಫಾರ್ಮ್ನಲ್ಲಿದ್ದಾರೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ 400 ಮೀ. ಓಟದಲ್ಲಿ ಭಾಗವಹಿಸುವ ಹುಮ್ಮಸ್ಸಿನಲ್ಲಿದ್ದರು.
Next Story