3ನೇ ಟ್ವೆಂಟಿ-20 ಪಂದ್ಯ : ಆಫ್ರಿಕಾ ತಂಡಕ್ಕೆ ಭರ್ಜರಿ ಜಯ
ಸರಣಿ 1-1 ಸಮಬಲ
ಬೆಂಗಳೂರು, ಸೆ.22: ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ದಕ್ಷಿಣ ಆಫ್ರಿಕಾ 9 ವಿಕೆಟ್ಗಳ ಭರ್ಜರಿ ಜಯ ಗಳಿಸಿದೆ. ಆಫ್ರಿಕಾದ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯನ್ನು 1-1 ಸಮಬಲ ಸಾಧಿಸಿದ್ದು, ಉಭಯ ತಂಡಳು ಸರಣಿಯನ್ನು ಹಂಚಿಕೊಂಡಿದೆ. ಮೊದಲ ಪಂದ್ಯ ಮಳೆಗೆ ಕೊಚ್ಚಿಹೋಗಿತ್ತು. ಎರಡನೇ ಪಂದ್ಯದಲ್ಲಿ ಭಾರತ ಜಯ ಗಳಿಸಿತ್ತು. ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 135 ರನ್ ಗಳಿಸಬೇಕಿದ್ದ ಆಫ್ರಿಕಾ ತಂಡ ಇನ್ನೂ 19 ಎಸೆತಗಳು ಬಾಕಿ ಇರುವಾಗಲೇ 1 ವಿಕೆಟ್ ನಷ್ಟದಲ್ಲಿ 140 ರನ್ ಗಳಿಸಿತ್ತು.
ನಾಯಕ ಕ್ವಿಂಟನ್ ಡಿ ಕಾಕ್ ಔಟಾಗದೆ 79 ರನ್( 52 ಎ, 6ಬೌ, 5ಸಿ) ಮತ್ತು ತೆಂಬಾ ಬವುಮಾ ಔಟಾಗದೆ 27 ರನ್ ಮತ್ತು ರೆಝಾ ಹೆಂಡ್ರಿಕ್ಸ್ 28 ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.
ಭಾರತ ಇದಕ್ಕೂ ಮೊದಲು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 134ರನ್ ಗಳಿಸಿದೆ.
Next Story