ಜೆರ್ಸಿಯಲ್ಲಿ ರಾಯಲ್ ಸ್ಟ್ಯಾಗ್ ಮದ್ಯದ ಬ್ರ್ಯಾಂಡ್ ಮರೆಮಾಚಿದ ಹಶೀಂ ಆಮ್ಲ
ಮೊಹಾಲಿ, ಮೇ 8 : ಐಪಿಎಲ್ ನ ಪಂಜಾಬ್ ತಂಡ ಸೇರಿಕೊಂಡು ಶನಿವಾರ ಈ ಸಾಲಿನ ಪ್ರಥಮ ಐಪಿಎಲ್ ಪಂದ್ಯ ಆಡಿದ ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟ್ ಆಟಗಾರ ಹಶೀಂ ಆಮ್ಲ ತಮ್ಮ ಸಮವಸ್ತ್ರದ ಮೂಲಕ ಗಮನ ಸೆಳೆದಿದ್ದಾರೆ.
ರಾಯಲ್ ಸ್ಟ್ಯಾಗ್ ಮದ್ಯದ ಬ್ರ್ಯಾಂಡ್ ನ ಚಿತ್ರವಿಲ್ಲದ ಜೆರ್ಸಿಧರಿಸಿದ ಆಮ್ಲ ತಾನು ನಂಬಿದ ಸಿದ್ಧಾಂತದೊಂದಿಗೆ ರಾಜಿ ಇಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಇಸ್ಲಾಮ್ ಧರ್ಮವನ್ನು ನಿಷ್ಠೆಯಿಂದ ಪಾಲಿಸುವ ಮುಸ್ಲಿಂ ಆಗಿರುವ ಹಶೀಂ ಆಮ್ಲ ಕ್ರಿಕೆಟ್ ಬದುಕಿನಲ್ಲೂ ತಾನು ನಂಬಿರುವ ಹಾಗು ಪಾಲಿಸುವ ಸಿದ್ಧಾಂತದಲ್ಲಿ ಹೊಂದಾಣಿಕೆ ಮಾಡದವರು. ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ತಂಡದ ಉಳಿದೆಲ್ಲ ಆಟಗಾರರ ಟೀ ಶರ್ಟ್ ನ ತೋಳಿನಲ್ಲಿ ರಾಯಲ್ ಸ್ಟ್ಯಾಗ್ ನ ಲೋಗೋ ಎದ್ದು ಕಾಣುತ್ತಿತ್ತು. ಆದರೆ ಅಮ್ಲರ ಟೀ ಶರ್ಟ್ ನಲ್ಲಿ ಮಾತ್ರ ಆ ಲೋಗೋ ಇರಲಿಲ್ಲ.
ಈ ಹಿಂದೆ ಐಪಿಎಲ್ ನಲ್ಲಿ ಆಡುವುದೇ ನನಗೆ ಸರಿ ಕಾಣುವುದಿಲ್ಲ ಎಂದು ಅವರು ಹೇಳಿದ್ದಾರೆಂದು ವರದಿಯಾಗಿತ್ತು.
Next Story