ತ್ರಿಕೋನ ಸರಣಿ ಫೈನಲ್ ಮಳೆಗಾಹುತಿ
ಟ್ರೋಫಿ ಹಂಚಿಕೊಂಡ ಬಾಂಗ್ಲಾ, ಅಫ್ಘಾನಿಸ್ತಾನ
ಢಾಕಾ,ಸೆ.24: ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದ ನಡುವಿನ ತ್ರಿಕೋನ ಟ್ವೆಂಟಿ-20 ಟೂರ್ನಿಯ ಫೈನಲ್ ಪಂದ್ಯ ಒಂದೂ ಎಸೆತ ಕಾಣದೇ ಮಳೆಗಾಹುತಿಯಾಗಿದೆ. ಮಳೆ ನಿಲ್ಲುವ ಲಕ್ಷಣ ಕಾಣದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 9ರ ಸುಮಾರಿಗೆ ಅಂಪೈರ್ಗಳು ಪಂದ್ಯವನ್ನು ರದ್ದುಪಡಿಸಲು ನಿರ್ಧರಿಸಿದರು. ಪಂದ್ಯ ರದ್ದಾದ ಕಾರಣ ಉಭಯ ತಂಡಗಳು ಟ್ರೋಫಿಯನ್ನು ಹಂಚಿಕೊಂಡಿವೆ.
Next Story