ಸ್ಟೀವ್ ಸ್ಮಿತ್ ದಾಖಲೆಯನ್ನು ಹಿಂದಿಕ್ಕಿದ ಅಗರ್ವಾಲ್
ವಿಶಾಖಪಟ್ಟಣ, ಅ.3: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ದಾಖಲಿಸಿದ ಭಾರತದ ಆರಂಭಿಕ ದಾಂಡಿಗ ಮಾಯಾಂಕ್ ಅಗರ್ವಾಲ್ ಅವರು ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್ ಸ್ಮಿತ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. 16 ತಿಂಗಳುಗಳ ನಿಷೇಧದ ಸಜೆಯ ಬಳಿಕ ಟೆಸ್ಟ್ ಕ್ರಿಕೆಟ್ಗೆ ವಾಪಸಾಗಿದ್ದ ಸ್ಮಿತ್ ಇಂಗ್ಲೆಂಡ್ ವಿರುದ್ದ ಕಳೆದ ಆ್ಯಶಸ್ ಸರಣಿಯಲ್ಲಿ ಮ್ಯಾಂಚೆಸ್ಟರ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ನಲ್ಲಿ 211 ರನ್ ಗಳಿಸಿದ್ದರು. ಇದೀಗ 2019ರ ಋತುವಿನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಸ್ಮಿತ್ ದಾಖಲೆಯನ್ನು ಮಾಯಾಂಕ್ ಮುರಿದಿದ್ದಾರೆ .
ಜೇಸನ್ ಹೋಲ್ಡರ್ (ಔಟಾಗದೆ 202), ಕೇನ್ ವಿಲಿಯಮ್ಸನ್(ಔಟಾಗದೆ 200) ಮತ್ತು ರಾಸ್ ಟೇಲರ್(200) ಈ ವರ್ಷ ದ್ವಿಶತಕ ದಾಖಲಿಸಿದ ಬ್ಯಾಟ್ಸ್ಮನ್ಗಳು. ಮಾಯಾಂಕ್ ಅಗರ್ವಾಲ್(215) ಇವರೆಲ್ಲರ ದಾಖಲೆಯನ್ನು ಮುರಿದಿದ್ದಾರೆ.
Next Story