ಪ್ರೊ ಕಬಡ್ಡಿ: ಮುಂಬಾಗೆ ಹ್ಯಾಟ್ರಿಕ್ ಜಯ
ಗ್ರೇಟರ್ ನೊಯ್ಡ, ಅ.10: ಯು ಮುಂಬಾ ತಂಡ ಹರ್ಯಾಣ ಸ್ಟೀಲರ್ಸ್ ತಂಡವನ್ನು 39-33 ಅಂಕಗಳ ಅಂತರದಿಂದ ಮಣಿಸಿ 7ನೇ ಆವೃತ್ತಿಯ ಕಬಡ್ಡಿ ಲೀಗ್ನಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿತು.
ಪ್ಲೇ-ಆಫ್ಗೆ ಮೊದಲು ತನ್ನ ಕೊನೆಯ ಲೀಗ್ ಪಂದ್ಯ ಆಡಿದ ಹರ್ಯಾಣದ ಪರ ವಿನಯ್(11) ಹಾಗೂ ವಿಕಾಸ್ (6) ಒಂದಷ್ಟು ಹೋರಾಟ ನೀಡಿದರು. 22ನೇ ಪಂದ್ಯದಲ್ಲಿ 8ನೇ ಸೋಲು ಕಂಡ ಹರ್ಯಾಣ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಮುಂಬಾ ತಂಡದ ಪರ ಅಜಿಂಕ್ಯ ಕಾತ್ರೆ 10 ಹಾಗೂ ಲೀ ಡಾಂಗ್ ಜಿಯೊನ್ 9 ಅಂಕ ಗಳಿಸಿ ಸತತ 3ನೇ ಗೆಲುವಿಗೆ ನೆರವಾದರು. ಮುಂಬಾ 21ರಲ್ಲಿ 12ನೇ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಅ.11ರಂದು ದಿಲ್ಲಿ ದಬಾಂಗ್ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಈ ಎರಡು ತಂಡಗಳು ಈಗಾಗಲೇ ಪ್ಲೇ-ಆಫ್ಗೆ ತೇರ್ಗಡೆಯಾಗಿವೆ.
Next Story