ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ದ್ವಿಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್ಮನ್ ಕೊಹ್ಲಿ
ದ.ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ನಲ್ಲಿ 7ನೇ ದ್ವಿಶತಕ
ಪುಣೆ,ಅ.11: ಭಾರತದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರ ಏಳನೇ ದ್ವಿಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.
143.4ನೇ ಓವರ್ನಲ್ಲಿ ಸ್ಪಿನ್ನರ್ ಮುತ್ತುಸ್ವಾಮಿ ಎಸೆತದಲ್ಲಿ ಎರಡು ರನ್ ಗಳಿಸಿದ ಕೊಹ್ಲಿ ದ್ವಿಶತಕ ಪೂರೈಸಿದರು. 295 ಎಸೆತಗಳಲ್ಲಿ 200 ರನ್ ಗಳಿಸಿದ್ದ ಕೊಹ್ಲಿ ಇನಿಂಗ್ಸ್ನಲ್ಲಿ 28 ಬೌಂಡರಿಗಳಿದ್ದವು.
ಕೊಹ್ಲಿ 7ನೇ ದ್ವಿಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು. ಈ ಮೂಲಕ ತಲಾ ಆರು ಬಾರಿ ದ್ವಿಶತಕ ಸಿಡಿಸಿದ್ದ ಸಚಿನ್ ತೆಂಡುಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಡಾನ್ ಬ್ರಾಡ್ಮನ್ ಗರಿಷ್ಠ ದ್ವಿಶತಕ(12)ಸಿಡಿಸಿದ್ದಾರೆ.
ಇದೇ ವೇಳೆ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 7,000 ರನ್ ಪೂರೈಸಿದ ಸಾಧನೆಯನ್ನೂ ಮಾಡಿದರು.
Next Story