ರಾಷ್ಟ್ರೀಯ ದಾಖಲೆ ನಿರ್ಮಿಸಿದ ದ್ಯುತಿ
ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್
ರಾಂಚಿ, ಅ.11: ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಶುಕ್ರವಾರ ಭಾರತದ ಓಟಗಾರ್ತಿ ದ್ಯುತಿ ಚಂದ್ 100 ಮೀ. ಓಟದ ಸ್ಪರ್ಧೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದರು. 11.22 ಸೆಕೆಂಡ್ನಲ್ಲಿ ಸೆಮಿ ಫೈನಲ್ ಸ್ಪರ್ಧೆಯಲ್ಲಿ ಜಯಶಾಲಿಯಾದ ಚಂದ್ ಫೈನಲ್ ಸ್ಪರ್ಧೆಯನ್ನು 11.25 ಸೆಕೆಂಡ್ನಲ್ಲಿ ಗೆದ್ದುಕೊಂಡರು. ದ್ಯುತಿ ಶುಕ್ರವಾರ ಎರಡು ರೇಸ್ಗಳಲ್ಲಿ ಭಾಗವಹಿಸಿದ್ದು, ಎರಡರಲ್ಲೂ ತನ್ನ ಹಿಂದಿನ ರಾಷ್ಟ್ರೀಯ ದಾಖಲೆಗಿಂತ ವೇಗವಾಗಿ ಓಡಿದರು. ಈ ಹಿಂದೆ 100 ಮೀ.ಸ್ಪರ್ಧೆಯ ದಾಖಲೆ(11.26 ಸೆ.)ದ್ಯುತಿ ಹಾಗೂ ರಚಿತಾ ಮಿಸ್ಟ್ರೀ ಇಬ್ಬರ ಹೆಸರಲ್ಲಿತ್ತು.
ಇಂದು ಉತ್ತಮ ಪ್ರದರ್ಶನ ನೀಡಿದ ದ್ಯುತಿ 2020ರ ಒಲಿಂಪಿಕ್ಸ್ ಅರ್ಹತಾ ಸಮಯ(11.15 ಸೆ.)ತಲುಪುವತ್ತ ಹೆಜ್ಜೆ ಇಟ್ಟಿದ್ದಾರೆ. ಅರ್ಹತಾ ಅವಧಿಯು ಮುಂದಿನ ವರ್ಷದ ಜೂನ್ಗೆ ಕೊನೆಯಾಗಲಿದೆ.
Next Story