14ರ ಬಾಲಕ ಪ್ರಗ್ಯಾನಂದ ಅಂಡರ್-18 ವಿಶ್ವ ಚೆಸ್ ಚಾಂಪಿಯನ್
ಮುಂಬೈ, ಅ.12: ಚೆನ್ನೈನ 14ರ ಹರೆಯದ ಗ್ರಾಂಡ್ಮಾಸ್ಟರ್ ಪ್ರಗ್ಯಾನಂದ ರವಿವಾರ ಅಂಡರ್-18 ವಿಭಾಗದಲ್ಲಿ ಚಿನ್ನ ಜಯಿಸುವುದರೊಂದಿಗೆ ವಿಶ್ವ ಯೂತ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಕಿಂಗ್ ಆಗಿ ಹೊರಹೊಮ್ಮಿದರು.
ಜರ್ಮನಿಯ ವಲೆಂಟಿನ್ ಬುಕೆಲ್ಸ್ ವಿರುದ್ಧ 11ನೇ ಹಾಗೂ ಅಂತಿಮ ಸುತ್ತಿನಲ್ಲಿ ಎಚ್ಚರಿಕೆಯ ಡ್ರಾ ಸಾಧಿಸಿದ ಪ್ರಗ್ಯಾನಂದ ಒಟ್ಟು 9 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರು.
Next Story