ಭಾರತ ಫೈನಲ್ಗೆ ಪ್ರವೇಶ
ಸುಲ್ತಾನ್ ಆಫ್ ಜೊಹೊರ್ ಕಪ್
►ಆಸ್ಟ್ರೇಲಿಯ ವಿರುದ್ಧ 5-1 ಗೆಲುವು, ಶೀಲಾನಂದ ಅವಳಿ ಗೋಲು
ಜೊಹೊರ್ ಬಹ್ರು(ಮಲೇಶ್ಯಾ), ಅ.16: ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡ ಆಸ್ಟ್ರೇಲಿಯವನ್ನು 5-1 ಗೋಲುಗಳ ಅಂತರದಿಂದ ಮಣಿಸಿ 9ನೇ ಆವೃತ್ತಿಯ ಸುಲ್ತಾನ್ ಆಫ್ ಜೊಹೊರ್ ಕಪ್ನಲ್ಲಿ ಫೈನಲ್ಗೆ ಅರ್ಹತೆ ಪಡೆದಿದೆ.
ಇಲ್ಲಿ ಬುಧವಾರ ತಮನ್ ದಯಾ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ಪರ ಶೀಲಾನಂದ ಲಾಕ್ರಾ(26ನೇ,29ನೇ ನಿಮಿಷ)ಅವಳಿ ಗೋಲು ಗಳಿಸಿದರೆ, ದಿಲ್ಪ್ರೀತ್ ಸಿಂಗ್(44ನೇ ನಿ.), ಗುರುಸಾಹಿಬ್ಜಿತ್ ಸಿಂಗ್(48ನೇ ನಿ.) ಹಾಗೂ ಮನ್ದೀಪ್ ಮೋರ್(50ನೇ ನಿ.)ತಲಾ ಒಂದು ಗೋಲು ಗಳಿಸಿದರು.
ಆಸ್ಟ್ರೇಲಿಯ ಎಸೆದ ತಪ್ಪಿನಿಂದಾಗಿ ಭಾರತ ಮೊದಲ ನಿಮಿಷದಲ್ಲಿ ಗೋಲು ಬಾರಿಸಲು ಯತ್ನಿಸಿತು. ಗುರುಸಾಯಿಬ್ಜಿತ್ ಬಾರಿಸಿದ ಗೋಲನ್ನು ರಾಬರ್ಟ್ ಮೆಕ್ಲೆನನ್ ತಡೆದರು. ಮೊದಲ ಕ್ವಾರ್ಟರ್ನ ಉಳಿದ ಅವಧಿಯಲ್ಲಿ ಉಭಯ ತಂಡಗಳು ಮಿಡ್ಫೀಲ್ಡ್ ನಲ್ಲಿ ಹಿಡಿತ ಸಾಧಿಸಲು ಪೈಪೋಟಿ ನಡೆಸಿದವು. ಆಸ್ಟ್ರೇಲಿಯ 8ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಭಾರತಕ್ಕೆ 26ನೇ ನಿಮಿಷದಲ್ಲಿ ಶೀಲಾನಂದ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. 29ನೇ ನಿಮಿಷದಲ್ಲಿ ಮತ್ತೊಂದು ಗೋಲುಗಳಿಸಿದ ಶೀಲಾನಂದ ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಭಾರತ 2-0 ಮುನ್ನಡೆ ಪಡೆದ ಹೊರತಾಗಿಯೂ ಮೂರನೇ ಕ್ವಾರ್ಟರ್ನಲ್ಲಿ ಶೀಲಾನಂದ, ಸುದೀಪ್ ಹಾಗೂ ಉತ್ತಮ್ ಸಿಂಗ್ ಎದುರಾಳಿ ಆಸೀಸ್ಗೆ ಒತ್ತಡ ಹೇರುವುದನ್ನು ಮುಂದುವ ರಿಸಿದರು. ಭಾರತ ಶುಕ್ರವಾರ ನಡೆಯಲಿರುವ ಅಂತಿಮ ಸುತ್ತಿನ ರೌಂಡ್ ರಾಬಿನ್ ಲೀಗ್ ಹಂತದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ.