ಫ್ರೆಂಚ್ ಓಪನ್: ಶುಭಾಂಕರ್ ಶುಭಾರಂಭ
ಪ್ಯಾರಿಸ್, ಅ.22: ಇಂಡೋನೇಶ್ಯದ ಟಾಮ್ಮಿ ಸುಗಿಯಾರ್ಟೊ ವಿರುದ್ಧ ಜಯ ಸಾಧಿಸಿರುವ ಭಾರತದ ಶುಭಾಂಕರ್ ಡೇ ಮಂಗಳವಾರ ಇಲ್ಲಿ ಆರಂಭವಾದ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಶುಭಾರಂಭ ಮಾಡಿದರು.
ಬಿಡಬ್ಲುಎಫ್ ಸೂಪರ್ 750 ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.42ನೇ ಆಟಗಾರ ಶುಭಾಂಕರ್ ವಿಶ್ವದ ನಂ.17ನೇ ರ್ಯಾಂಕಿನ ಎದುರಾಳಿ ಸುಗಿಯಾರ್ಟೊರನ್ನು 1 ಗಂಟೆ ಹಾಗೂ 18 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ 15-21, 21-14, 21-17 ಗೇಮ್ಗಳ ಅಂತರದಿಂದ ಮಣಿಸಿದರು.
ಶುಭಾಂಕರ್ ಇಂಡೋನೇಶ್ಯದ ಆಟಗಾರನ ವಿರುದ್ಧ ಎರಡನೇ ಗೆಲುವು ದಾಖಲಿಸಿದರು. ವಿಶ್ವದ ಮಾಜಿ ನಂ.3ನೇ ಆಟಗಾರ ಶುಭಾಂಕರ್ ಈ ವರ್ಷದ ಮಾರ್ಚ್ನಲ್ಲಿ ನಡೆದ ಇಂಡಿಯಾ ಓಪನ್ನಲ್ಲಿ 14-21, 22-20, 21-11 ಗೇಮ್ಗಳ ಅಂತರದಿಂದ ಸೋಲಿಸಿದ್ದರು.
ಕಳೆದ ವರ್ಷ ನಡೆದ ನ್ಯೂಝಿಲ್ಯಾಂಡ್ ಓಪನ್ನಲ್ಲಿ ಶುಭಾಂಕರ್ ಅವರು ಸುಗಿಯಾರ್ಟೊ ವಿರುದ್ಧ ಸೋತಿದ್ದರು.
Next Story