ಶಿವ ಥಾಪಾ ಸೇರಿದಂತೆ 6 ಮಂದಿ ಸೆಮಿಫೈನಲ್ಗೆ
ಟೋಕಿಯೊ, ಅ.29: ನಾಲ್ಕು ಬಾರಿ ಏಶ್ಯನ್ ಚಾಂಪಿಯನ್ ಶಿವ ಥಾಪಾ (63 ಕೆ.ಜಿ) ಸೇರಿದಂತೆ 6 ಮಂದಿ ಬಾಕ್ಸರ್ಗಳು ಒಲಿಂಪಿಕ್ ಟೆಸ್ಟ್ ಇವೆಂಟ್ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಥಾಪಾ ಅವರು ಸ್ಥಳೀಯ ಬಾಕ್ಸರ್ ಯೂಕಿ ಹಿರಾಕ್ವಾವಾರನ್ನು ಕ್ವಾರ್ಟರ್ ಫೈನಲ್ನಲ್ಲಿ 5-0 ಅಂತರದಲ್ಲಿ ಬಗ್ಗು ಬಡಿದು ಸೆಮಿಫೈನಲ್ ಪ್ರವೇಶಿಸಿದರು. ಅಸ್ಸಾಂನ ಬಾಕ್ಸರ್ ಥಾಪಾ ಇತ್ತೀಚೆಗೆ ಮೂರನೇ ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಬುಧವಾರ ನಡೆಯಲಿರುವ ಸೆಮಿಫೈನಲ್ನಲ್ಲಿ ಥಾಪಾ ಅವರು ಜಪಾನ್ನ ಡೈಸುಕೆ ನಾರಿಮಾಸ್ಟು ಅವರನ್ನು ಎದುರಿಸಲಿದ್ದಾರೆ. ಡೈಸುಕೆ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು.
ಜೂನಿಯರ್ ವರ್ಲ್ಡ್ ಚಾಂಪಿಯನ್ ನಿಕಾತ್ ಝರೀನ್(51 ಕೆ.ಜಿ) ಅವರು ಸೆಮಿಫೈನಲ್ನಲ್ಲಿ ಅವಕಾಶ ದೃಢಪಡಿಸಿದ್ದಾರೆ. ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ರಜತ ಪಡೆದ ಸುಮಿತ್ ಸಾಂಗ್ವಾನ್( 91 ಕೆ.ಜಿ), ಆಶೀಷ್(69 ಕೆ.ಜಿ), ವಾನ್ಹ್ಲಿಂಪುಯಾ (75 ಕೆ.ಜಿ), ಸಿಮ್ರಾಂಜಿತ್ ಕೌರ್(60 ಕೆ.ಜಿ) ಮತ್ತು ಪೂಜಾ ರಾಣಿ(75 ಕೆ.ಜಿ) ಸೆಮಿಫೈನಲ್ ಪ್ರವೇಶಿಸಿದ್ದಾರೆ. ಸಾಂಗ್ವಾನ್ ಇತ್ತೀಚೆಗೆ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು.