ಯುವ ಶೂಟರ್ ಪ್ರತಾಪ್ ಥೋಮರ್ಗೆ ಒಲಿಂಪಿಕ್ಸ್ ಟಿಕೆಟ್
ದೋಹಾ,ನ.10: ಇಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಏಶ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನ ಪುರುಷರ 50 ಮೀ. ರೈಫಲ್ 3 ಪೊಸಿಶನ್ಸ್ನಲ್ಲಿ ಕಂಚಿನ ಪದಕ ಜಯಿಸಿದ ಭಾರತದ ಯುವ ಶೂಟರ್ ಐಶ್ವರ್ಯ ಪ್ರತಾಪ್ ಸಿಂಗ್ ಭಾರತದ 13ನೇ ಒಲಿಂಪಿಕ್ಸ್ ಕೋಟಾವನ್ನು ಭರ್ತಿ ಮಾಡಿದರು. 18ರ ಹರೆಯದ ಥೋಮರ್ 8 ಸ್ಪರ್ಧಿಗಳಿದ್ದ ಫೈನಲ್ನಲ್ಲಿ 449.1 ಅಂಕವನ್ನು ಗಳಿಸಿ ಮೂರನೇ ಸ್ಥಾನ ಪಡೆದರು. ಕೊರಿಯಾದ ಕಿಮ್ ಜಾಂಗ್ಯುನ್(459.9) ಹಾಗೂ ಚೀನಾದ ರೊಂಘಾವೊ ಝಾವೊ(459.1)ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಗೆದ್ದುಕೊಂಡರು. ಅರ್ಹತಾ ಸುತ್ತಿನಲ್ಲಿ 1168 ಅಂಕವನ್ನು ಗಳಿಸಿದ ಥೋಮರ್ ಫೈನಲ್ಗೆ ಪ್ರವೇಶಿಸಿದ್ದರು. ಈ ಟೂರ್ನಿಯಲ್ಲಿ ಮೂರು ಒಲಿಂಪಿಕ್ಸ್ ಕೋಟಾಗಳನ್ನು ನೀಡಲಾಗಿತ್ತು. ಭಾರತ 2012ರ ಲಂಡನ್ ಒಲಿಂಪಿಕ್ಸ್ ಗೆ 11 ಶೂಟರ್ಗಳನ್ನು ಕಳುಹಿಸಿಕೊಟ್ಟಿದ್ದರೆ, 2016ರ ರಿಯೋ ಒಲಿಂಪಿಕ್ಸ್ಗೆ 12 ಶೂಟರ್ಗಳು ತೆರಳಿದ್ದರು.
Next Story