ಮೊದಲ ಟೆಸ್ಟ್: ಮಾಯಾಂಕ್ ಮೂರನೇ ಶತಕ
ಇಂದೋರ್, ನ.15: ಭಾರತದ ಆರಂಭಿಕ ಬ್ಯಾಟ್ಸ್ಮನ್ ಮಾಯಾಂಕ್ ಅಗರ್ವಾಲ್ ಮೂರನೇ ಟೆಸ್ಟ್ ಶತಕವನ್ನು ಸಿಡಿಸಿ ಮಿಂಚಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದರು.
183 ಎಸೆತಗಳನ್ನು ಎದುರಿಸಿದ ಅಗರ್ವಾಲ್ 15 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು.
ಚೇತೇಶ್ವರ ಪೂಜಾರ(54) ಅವರೊಂದಿಗೆ 2ನೇ ವಿಕೆಟ್ಗೆ 91 ರನ್ ಜೊತೆಯಾಟದಲ್ಲಿ ಭಾಗಿಯಾದ ಮಾಯಾಂಕ್ ಅವರು ಅಜಿಂಕ್ಯ ರಹಾನೆ ಜೊತೆ 4ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 94 ರನ್ ಸೇರಿಸಿ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ಯುತ್ತಿದ್ದಾರೆ
Next Story