ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಪೃಥ್ವಿ ಶಾ ವೇಗದ ಅರ್ಧಶತಕ
ಮುಂಬೈ, ನ.17: ಡೋಪಿಂಗ್ ಕಾರಣಕ್ಕಾಗಿ ಕ್ರಿಕೆಟ್ ನಿಂದ 8 ತಿಂಗಳ ನಿಷೇಧವನ್ನು ಎದುರಿಸಿ ವಾಪಸಾಗಿರುವ ಆರಂಭಿಕ ದಾಂಡಿಗ ಪೃಥ್ವಿ ಶಾ ಅವರು ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಪಂದ್ಯದಲ್ಲಿ ಇಂದು ವೇಗದ ಅರ್ಧ ಶತಕ ದಾಖಲಿಸಿದ್ದಾರೆ.
ಮುಂಬೈ ಈ ಪಂದ್ಯದಲ್ಲಿ ಅಸ್ಸಾಂ ವಿರುದ್ಧ 83 ರನ್ ಗಳ ಜಯ ಗಳಿಸಿದೆ. 207 ರನ್ ಗಳಿಸಬೇಕಿದ್ದ ಅಸ್ಸಾಂ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 123 ರನ್ ಗಳಿಸಿತು.
ಟೆಸ್ಟ್ ಚೊಚ್ಚಲ ತನ್ನ ಪಂದ್ಯದಲ್ಲಿ ಶತಕ ಗಳಿಸಿದ ಎರಡನೇ ಕಿರಿಯ ಭಾರತೀಯ ಎನಿಸಿಕೊಂಡಿದ್ದ ಮುಂಬೈನ ಆರಂಭಿಕ ಬ್ಯಾಟ್ಸ್ ಮನ್ಶಾ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಸ್ಸಾಂ ವಿರುದ್ಧ ಪಂದ್ಯದಲ್ಲಿ 39 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 63 ರನ್ ಗಳಿಸಿದರು.
ಡೋಪಿಂಗ್ ಆರೋಪದಲ್ಲಿ ಅಮಾನತುಗೊಂಡಿದ್ದ 20ರ ಹರೆಯದ ಶಾ ಅರ್ಧಶತಕದ ನೆರವಿನಲ್ಲಿ ಮುಂಬೈ ತಂಡ ದೊಡ್ಡ ಮೊತ್ತದ ಸ್ಕೋರ್ ದಾಖಲಿಸಿದೆ.
ಮುಂಬೈ ಈ ಪಂದ್ಯದಲ್ಲಿ 5 ವಿಕೆಟ್ ನಷ್ಟದಲ್ಲಿ 206 ರನ್ ಗಳಿಸಿತು. ಶಾ ಮತ್ತು ಆದಿತ್ಯ ತಾರೆ ಮೊದಲ ವಿಕೆಟ್ಗೆ 138 ರನ್ ಗಳ ಜೊತೆಯಾಟ ನೀಡಿದರು. ತಾರೆ 48 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ವಿಕೆಟ್ 82 ರನ್ ಸೇರಿಸಿದರು.