ತಮಿಳುನಾಡು ವಿರುದ್ಧ ಕರ್ನಾಟಕ 259/6
ರಣಜಿ ಟ್ರೋಫಿ: ದೇವದತ್ತ ಪಡಿಕ್ಕಲ್, ಪವನ್ ದೇಶಪಾಂಡೆ ಅರ್ಧಶತಕ
ದಿಂಡಿಗಲ್, ಡಿ.9: ಅಗ್ರ ಸರದಿಯ ಬ್ಯಾಟ್ಸ್ಮನ್ ದೇವದತ್ತ ಪಡಿಕ್ಕಲ್(78, 182 ಎಸೆತ)ಹಾಗೂ ಪವನ್ ದೇಶಪಾಂಡೆ(65, 142 ಎಸೆತ)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಸೋಮವಾರ ಆರಂಭವಾದ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದ ಮೊದಲ ದಿನದಾಟದಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ ಗೌರವಾರ್ಹ ಮೊತ್ತ ಗಳಿಸಿದೆ.
ಟಾಸ್ ಜಯಿಸಿದ ಕರ್ನಾಟಕ ಮೊದಲ ದಿನದಾಟದಂತ್ಯಕ್ಕೆ 94 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 259 ರನ್ ಗಳಿಸಿತು.
3.5ನೇ ಓವರ್ನಲ್ಲಿ ಮೊದಲ ವಿಕೆಟ್ ಕಳೆದುಕೊಂಡ ಕರ್ನಾಟಕ ಕಳಪೆ ಆರಂಭ ಪಡೆದಿತ್ತು. ಡೆಗಾ ನಿಶ್ಚಲ್ 4 ರನ್ ಗಳಿಸಿ ವ್ನಿೇಶ್ಗೆ ಕ್ಲೀನ್ಬೌಲ್ಡಾದರು. ಆಗ ಜೊತೆಯಾದ ಪಡಿಕ್ಕಲ್(78, 182 ಎಸೆತ, 7 ಬೌಂಡರಿ)ಹಾಗೂ ಮಾಯಾಂಕ್ ಅಗರ್ವಾಲ್(43, 78 ಎಸೆತ, 7 ಬೌಂಡರಿ,1 ಸಿಕ್ಸರ್)2ನೇ ವಿಕೆಟ್ ಜೊತೆಯಾಟದಲ್ಲಿ 67 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಅಗರ್ವಾಲ್ 43 ರನ್ ಗಳಿಸಿ ಸಿದ್ದಾರ್ಥ್ಗೆ ವಿಕೆಟ್ ಒಪ್ಪಿಸಿ ನಿರಾಸೆಗೊಳಿಸಿದರು. ಅಗರ್ವಾಲ್ ಔಟಾದ ಬೆನ್ನಿಗೇ ನಾಯಕ ಕರುಣ್ ನಾಯರ್ ಕೇವಲ 8 ರನ್ ಗಳಿಸಿ ರನೌಟಾದರು.
ಕರ್ನಾಟಕ 88 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜೊತೆಯಾದ ಪಡಿಕ್ಕಲ್ ಹಾಗೂ ದೇಶಪಾಂಡೆ 4ನೇ ವಿಕೆಟ್ ಜೊತೆಯಾಟದಲ್ಲಿ 208 ಎಸೆತಗಳಲ್ಲಿ 116 ರನ್ ಸೇರಿಸಿದರು. ಪಡಿಕ್ಕಲ್ 78 ರನ್ ಗಳಿಸಿ ಔಟಾಗುವ ಮೊದಲು ಮೂರು ಬಾರಿ ಜೀವದಾನ ಪಡೆದಿದ್ದರು.
ಶತಕದ ಮೇಲೆ ಕಣ್ಣಿಟ್ಟಿದ್ದ ಪವನ್ ದೇಶಪಾಂಡೆ 65 ರನ್ ಗಳಿಸಿ ಆರ್.ಅಶ್ವಿನ್ಗೆ ವಿಕೆಟ್ ಒಪ್ಪಿಸಿದರು.
ದಿನದಾಟದಂತ್ಯಕ್ಕೆ ಎಸ್.ಗೋಪಾಲ್(ಔಟಾಗದೆ 35)ಹಾಗೂ ಮಥಾಯಿಸ್(0)ಕ್ರೀಸ್ ಕಾಯ್ದುಕೊಂಡಿದ್ದರು.
ತಮಿಳುನಾಡಿನ ಬೌಲಿಂಗ್ ವಿಭಾಗದಲ್ಲಿ ಎಂ.ಸಿದ್ದಾರ್ಥ್(2-33)ಎರಡು ವಿಕೆಟ್ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 94 ಓವರ್ಗಳಲ್ಲಿ 259/6
(ದೇವದತ್ತ ಪಡಿಕ್ಕಲ್ 78, ಪವನ್ ದೇಶಪಾಂಡೆ 65, ಮಾಯಾಂಕ್ ಅಗರ್ವಾಲ್ 43, ಎಸ್.ಗೋಪಾಲ್ ಔಟಾಗದೆ 35, ಸಿದ್ದಾರ್ಥ್ 2-33)
150ನೇ ರಣಜಿ ಪಂದ್ಯದಲ್ಲಿ ಕಾಣಿಸಿಕೊಂಡ ವಸೀಂ ಜಾಫರ್
ವಿಜಯವಾಡ, ಡಿ.9: ಹಿರಿಯ ಆರಂಭಿಕ ಆಟಗಾರ ವಸೀಂ ಜಾಫರ್ 150ನೇ ರಣಜಿ ಟ್ರೋಫಿ ಪಂದ್ಯದಲ್ಲಿ ಆಡುವುದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸೋಮವಾರ ಮತ್ತೊಂದು ಮೈಲುಗಲ್ಲು ತಲುಪಿದರು.
ಹಾಲಿ ಚಾಂಪಿಯನ್ ವಿದರ್ಭ ಪರ ಆಡಿದ ಜಾಫರ್ ಆಂಧ್ರ ತಂಡದ ವಿರುದ್ಧ ದೇವಿನೇನಿ ವೆಂಕಟ ರಮಣ ಪ್ರನೀತಾ ಮೈದಾನದಲ್ಲಿ 150ನೇ ರಣಜಿ ಪಂದ್ಯದಲ್ಲಿ ಕಾಣಿಸಿಕೊಂಡರು.
ಜಾಫರ್ ಬಳಿಕ ದೇವೇಂದ್ರ ಬಂಡೇಲಾ ಹಾಗೂ ಅಮೋಲ್ ಮುಜುಂದಾರ್ ರಣಜಿಯಲ್ಲಿ ಗರಿಷ್ಠ ಪಂದ್ಯಗಳನ್ನಾಡಿರುವ ಮುಂಬೈ ಆಟಗಾರರಾಗಿದ್ದಾರೆ. ಈ ಇಬ್ಬರು ಕ್ರಮವಾಗಿ 145 ಹಾಗೂ 136 ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡಿದ್ದಾರೆ.
ಜಾಫರ್ ರಣಜಿ ವೃತ್ತಿಜೀವನದಲ್ಲಿ 40 ಶತಕಗಳ ಸಹಿತ ಒಟ್ಟು 11,775 ರನ್ ಗಳಿಸಿದ್ದಾರೆ. ಮುಂಬೈ ಸಂಜಾತ ಬ್ಯಾಟ್ಸ್ಮನ್ ಒಟ್ಟು 253 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು 51.19ರ ಸರಾಸರಿಯಲ್ಲಿ 19,147 ರನ್ ಗಳಿಸಿದ್ದಾರೆ.
ಜಾಫರ್ 31 ಟೆಸ್ಟ್ ಹಾಗೂ 2 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ವಿದರ್ಭ ನಾಯಕ ಫೈಝ್ ಫಝಲ್ ಟಾಸ್ ಜಯಿಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆಂಧ್ರ 211 ರನ್ ಗಳಿಸಿ ಆಲೌಟಾಗಿದ್ದು, ವಿದರ್ಭ ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿದೆ.
ಮೊದಲ ದಿನ ಮುಂಬೈ 362/8
ಬರೋಡಾದ ವಿರುದ್ಧ ಟೆಸ್ಟ್ ತಜ್ಞ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ ಮತ್ತು ಯುವ ಓಪನರ್ ಪೃಥ್ವಿ ಶಾ ಬಾರಿಸಿದ ಅರ್ಧಶತಕಗಳ ನೆರವಿನಲ್ಲಿ ಮುಂಬೈ ತಂಡ ರಣಜಿ ಟ್ರೋಫಿ ಮೊದಲ ಪಂದ್ಯದ ಮೊದಲ ದಿನ 8 ವಿಕೆಟ್ ನಷ್ಟದಲ್ಲಿ 362 ರನ್ ಗಳಿಸಿದೆ. ರಹಾನೆ 145 ಎಸೆತಗಳಲ್ಲಿ 79 ರನ್ ಗಳಿಸಿದರು. ಶಾರ್ದೂಲ್ ಠಾಕೂರ್ 64 ಮತ್ತು ಶಂಸ್ ಮುಲಾನಿ ಔಟಾಗದೆ 56 ರನ್ ಗಳಿಸಿ ಮುಂಬೈಗೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ಎಂಟು ತಿಂಗಳ ನಿಷೇಧದ ಬಳಿಕ ಕ್ರಿಕೆಟ್ಗೆ ಮರಳಿರುವ ಪೃಥ್ವಿ ಶಾ ಮೊದಲ ಅರ್ಧಶತಕ ದಾಖಲಿಸಿದ್ದಾರೆ. ಟೀಮ್ ಇಂಡಿಯಾದಲ್ಲಿ ಮೂರನೇ ಓಪನರ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾ 62 ಎಸೆತಗಳಲ್ಲಿ 66 ರನ್ ಸಿಡಿಸಿದರು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡದ ಇನಿಂಗ್ಸ್ ಆರಂಭಿಸಿದ ಜೈ ಬಿಸ್ತ (18) ಮತ್ತು ಶಾ ಮೊದಲ ವಿಕೆಟ್ಗೆ 74 ರನ್ಗಳ ಜೊತೆಯಾಟ ನೀಡಿದರು. ಬಿಸ್ತಾ ಔಟಾದ ಬಳಿಕ ಶುಭಂ ರಂಜನೆ ಕ್ರೀಸ್ಗೆ ಆಗಮಿಸಿ 59 ಎಸೆತಗಳಲ್ಲಿ 36 ರನ್ ಗಳಿಸಿದರು. ಶಾ 11 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು. 18ನೇ ಓವರ್ನಲ್ಲಿ ಬಲಗೈ ವೇಗಿ ಅಭಿಮನ್ಯು ರಜಪೂತ್ ಅವರು ಶಾಗೆ ಪೆವಿಲಿಯನ್ ಹಾದಿ ತೋರಿಸಿದರು. 95ಕ್ಕೆ 2 ವಿಕೆಟ್ಗಳನ್ನು ಕಳೆದುಕೊಂಡ ಮುಂಬೈನ ಬ್ಯಾಟಿಂಗ್ಗೆ ರಹಾನೆ ಆಸರೆಯಾದರು.ರಹಾನೆ ಮೊದಲು ರಂಜನೆ ಜೊತೆ 57 ರನ್ಗಳ ಜೊತೆಯಾಟ ನೀಡಿದರು. ಮುಂಬೈ ಬಹಳ ಬೇಗನೇ ರಂಜನೆ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ವಿಕೆಟ್ನ್ನು ಕಿತ್ತುಕೊಂಡಿತು. ರಹಾನೆಗೆ ಮೊದಲು ಆಕಾಶ್ ಪಾರ್ಕರ್ ಮತ್ತು ಬಳಿಕ ಮುಲಾನಿ ಸಾಥ್ ನೀಡಿದರು. ಮುಲಾನಿ ನಿರ್ಗಮನದ ಬಳಿಕ ಶಾರ್ದೂಲ್ ಅರ್ಧಶತಕದ ಕೊಡುಗೆಯನ್ನು ನೀಡಿದರು. ಮುಲಾನಿ 7 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದರು. ಠಾಕೂರ್ 11 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು.
ಇತರ ಪಂದ್ಯಗಳ ಫಲಿತಾಂಶ
►ಧರ್ಮಶಾಲಾ: ಹಿಮಾಚಲ ಪ್ರದೇಶ 120 ಆಲೌಟ್(ಪ್ರಶಾಂತ್ ಚೋಪ್ರಾ 33, ಸುಮೀತ್ ವರ್ಮಾ 22; ಪ್ರೇರಕ್ ಮಂಕಡ್ 13ಕ್ಕೆ 3, ಚಿರಾಗ್ ಜೈನ್ 26ಕ್ಕೆ 3). ಸೌರಾಷ್ಟ್ರ 93/7( ಸ್ನೇಲ್ ಪಟೇಲ್ 42, ಅರ್ಪಿತ್ ವಾಸವಾದ 16, ವೈಭವ್ ಅರೋರಾ 20ಕ್ಕೆ 3, ಪಂಕಜ್ ಜೈಶ್ವಾಲ್ 29ಕ್ಕೆ 3)
►ಮೀರತ್: ರೈಲ್ವೇಸ್244/8(ದಿನೇಶ್ ಮೋರ್ ಔಟಾಗದೆ 89, ನವ್ನೀತ್ ವಿರ್ಕ್ 58; ಯಶ್ ದಯಾಲ್ 47ಕ್ಕೆ 3).
ಇತರ ರಣಜಿ ಪಂದ್ಯಗಳ ಮೊದಲ ದಿನದ ಫಲಿತಾಂಶ
►ಡೆಹ್ರಾಡೂನ್: ಜಮ್ಮು-ಕಾಶ್ಮೀರ 182, ಉತ್ತರಾಖಂಡ 64/7
►ಮೀರತ್: ಉತ್ತರಪ್ರದೇಶದ ವಿರುದ್ಧ ರೈಲ್ವೇಸ್ 244/8
►ಅಗರ್ತಲ: ಜಾರ್ಖಂಡ್ ವಿರುದ್ಧ ತ್ರಿಪುರಾ 263/8
►ಜೈಪುರ: ಪಂಜಾಬ್ ವಿರುದ್ಧ ರಾಜಸ್ಥಾನ 256/9
►ಥುಂಬ: ದಿಲ್ಲಿ ವಿರುದ್ಧ ಕೇರಳ 276/3
►ಹೈದರಾಬಾದ್:ಗುಜರಾತ್ ವಿರುದ್ಧ ಹೈದರಾಬಾದ್ 233
►ರೋಹ್ಟಕ್: ಮಹಾರಾಷ್ಟ್ರದ ವಿರುದ್ಧ ಹರ್ಯಾಣ 279/3
►ರಾಯ್ಪುರ: ಛತ್ತೀಸ್ಗಡ 134, ಒಡಿಶಾ 48/3
►ವಡೋದರ: ಬರೋಡಾ ವಿರುದ್ಧ ಮುಂಬೈ 362/8
►ವಿಜಯವಾಡ: ಆಂಧ್ರ 211, ವಿದರ್ಭ 26/0