ಮೊದಲ ಏಕದಿನ : ವಿಂಡೀಸ್ ಗೆಲುವಿಗೆ 288ರನ್ಗಳ ಸವಾಲು
ಚೆನ್ನೈ,ಡಿ.16: ಪ್ರವಾಸಿ ವೆಸ್ಟ್ಇಂಡೀಸ್ ವಿರುದ್ಧ ಮೊದಲ ಏಕದಿನ ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಭಾರತ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 287 ರನ್ ಗಳಿಸಿದೆ.
ಎಂ.ಎ.ಚಿದಂಬರಮ್ ಸೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಟೀಮ್ ಇಂಡಿಯಾ ಪರ ಶ್ರೇಯಸ್ ಅಯ್ಯರ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ನಾಲ್ಕನೇ ವಿಕೆಟ್ಗೆ ಜೊತೆಯಾಟದಲ್ಲಿ ದಾಖಲಿಸಿದ 114 ರನ್ಗಳ ನೆರವಿನಲ್ಲಿ ಭಾರತ ಸ್ಪರ್ಧಾತ್ಮಕ ಮೊತ್ತ ಸೇರಿಸಿತು.
ಶ್ರೇಯಸ್ ಅಯ್ಯರ್ 70 ರನ್(88ಎ, 5ಬೌ,1ಸಿ) ಮತ್ತು ರಿಷಭ್ ಪಂತ್ 71 ರನ್(69ಎ, 7ಬೌ, 1ಸಿ) ಗಳಿಸುವ ಮೂಲಕ ತಂಡದ ಪರ ಗರಿಷ್ಠ ವೈಯಕ್ತಿಕ ಕೊಡುಗೆ ನೀಡಿದರು.
ವೆಸ್ಟ್ಇಂಡೀಸ್ನ ಶೆಲ್ಡಾನ್ ಕಾಟ್ರೆಲ್ (46ಕ್ಕೆ 2), ಕೀಮೊ ಪಾಲ್(41ಕ್ಕೆ 2), ಅಲ್ಝಾರಿ ಜೋಸೆಫ್ (45ಕ್ಕೆ 2) ಮತ್ತು ಕೀರನ್ ಪೊಲಾರ್ಡ್ (28ಕ್ಕೆ 1) ದಾಳಿಗೆ ಸಿಲುಕಿ ಭಾರತದ ಅಗ್ರ ಸರದಿಯ ಮತ್ತು ಕೊನೆಯ ಸರದಿಯ ಬ್ಯಾಟ್ಸ್ಮನ್ಗಳನ್ನು ಬೇಗನೆ ಕಳೆದುಕೊಂಡ ಹಿನ್ನೆಲೆಯಲ್ಲಿ ತಂಡದ ಸ್ಕೋರ್ 300ರ ಗಡಿ ದಾಟಲಿಲ್ಲ.
Next Story