ಮುಂಬೈ-ರೈಲ್ವೆ, ಯುಪಿ-ಸೌರಾಷ್ಟ್ರ ಆಟಗಳು ತಡವಾಗಿ ಆರಂಭ
ಸೂರ್ಯಗ್ರಹಣ ಹಿನ್ನಲೆ
ಮುಂಬೈ, ಡಿ.25: ಮುಂಬೈ ಮತ್ತು ರಾಜ್ಕೋಟ್ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಗ್ರೂಪ್ ಪಂದ್ಯಗಳ ಎರಡನೇ ದಿನದ ಆಟ ಸೂರ್ಯಗ್ರಹಣದಿಂದಾಗಿ ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ ಪ್ರಾರಂಭವಾಗಲಿದೆ. ಮುಂಬೈ ಮತ್ತು ರೈಲ್ವೆ ತಂಡಗಳ ನಡುವೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮತ್ತು ಉತ್ತರ ಪ್ರದೇಶ ಮತ್ತು ಸೌರಾಷ್ಟ್ರ ತಂಡಗಳ ನಡುವಿನ ಪಂದ್ಯ ರಾಜ್ಕೋಟ್ನಲ್ಲಿ ಮೊದಲ ದಿನ ಪೂರೈಸಿದೆ.
ಎಲ್ಲಾ ರಣಜಿ ಟ್ರೋಫಿ ಪಂದ್ಯಗಳು ಬೆಳಗ್ಗೆ 9:30 ಕ್ಕೆ ಪ್ರಾರಂಭವಾಗುತ್ತವೆ. ಆದರೆ ಕಂಕಣ ಸೂರ್ಯಗ್ರಹಣದಿಂದಾಗಿ ಆಟ ಎರಡು ಗಂಟೆ ತಡವಾಗಲಿದೆ. ಬೆಳಗ್ಗೆ 11:30ಕ್ಕೆ ಆಟ ಪ್ರಾರಂಭಗೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Next Story