ಕ್ಯಾಚಿಂಗ್ ನಲ್ಲಿ ದಾಖಲೆ ನಿರ್ಮಿಸಿದ ಬೆನ್ ಸ್ಟೋಕ್ಸ್
ಕೇಪ್ಟೌನ್, ಜ.5: ಇಂಗ್ಲೆಂಡ್ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಲ್ಯಾಂಡ್ಸ್ನಲ್ಲಿ ರವಿವಾರ ನಡೆದ ದ್ವಿತೀಯ ಟೆಸ್ಟ್ನ ಮೂರನೇ ದಿನದಾಟದಲ್ಲಿ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ನಲ್ಲಿ ಅನ್ರಿಚ್ ನೊರ್ಟ್ಜೆ ನೀಡಿದ್ದ ಕ್ಯಾಚ್ನ್ನು ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ದಾಖಲೆಯೊಂದನ್ನು ನಿರ್ಮಿಸಿದರು. ಸ್ಟೋಕ್ಸ್ ಇನಿಂಗ್ಸ್ನಲ್ಲಿ ಐದನೇ ಕ್ಯಾಚ್ ಪಡೆದರು. ಎಲ್ಲ ಕ್ಯಾಚ್ನ್ನು ಫೀಲ್ಡಿಂಗ್ನ ಸೆಕೆಂಡ್ ಸ್ಲಿಪ್ ಸ್ಥಾನದಲ್ಲಿ ಪಡೆದಿರುವುದು ವಿಶೇಷ. ಇಂಗ್ಲೆಂಡ್ನ ಕಳೆದ 1019 ಟೆಸ್ಟ್ ಪಂದ್ಯಗಳಲ್ಲಿ ಇನಿಂಗ್ಸ್ವೊಂದರಲ್ಲಿ ನಾಲ್ಕು ಬಾರಿ ಕ್ಯಾಚ್ ಪಡೆದ 23 ನಿದರ್ಶನಗಳಿವೆ. ಕಳೆದ ವರ್ಷ ಲಾರ್ಡ್ಸ್ನಲ್ಲಿ ಇಂಗ್ಲೆಂಡ್ನ ನಾಯಕ ಜೋ ರೂಟ್ ಐರ್ಲೆಂಡ್ನ ವಿರುದ್ಧ 4 ಕ್ಯಾಚ್ ಪಡೆದ ಸಾಧನೆ ಮಾಡಿದ್ದರು. ಸ್ಟೋಕ್ಸ್ ಒಟ್ಟು ಐದು ಕ್ಯಾಚ್ಗಳನ್ನು ಪಡೆಯುವುದರೊಂದಿಗೆ ವಿಶ್ವ ದಾಖಲೆ ಸರಿಗಟ್ಟಿದರು. 2017-18ರಲ್ಲಿ ನ್ಯೂಲ್ಯಾಂಡ್ಸ್ನಲ್ಲಿ ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ ಇನಿಂಗ್ಸ್ವೊಂದರಲ್ಲಿ ಐದು ಕ್ಯಾಚ್ ಪಡೆದ ಸಾಧನೆ ಮಾಡಿದ್ದರು.