ನಿಧಿಸಂಗ್ರಹಕ್ಕೆ ಫೆಡರರ್, ನಡಾಲ್,ಸೆರೆನಾ ನೆರವು
ಮೆಲ್ಬೋರ್ನ್, ಜ.8: ಕಾಡ್ಗಿಚ್ಚು ಪರಿಹಾರ ನಿಧಿಗೆ ಹಣ ಸಂಗ್ರಹಿಸುವ ಉದ್ದೇಶದಿಂದ ಈ ತಿಂಗಳು ನಡೆಯುವ ಆಸ್ಟ್ರೇಲಿಯನ್ ಓಪನ್ಗಿಂತ ಮೊದಲು ಪ್ರದರ್ಶನ ಪಂದ್ಯವನ್ನಾಡಲು ರೋಜರ್ ಫೆಡರರ್, ರಫೆಲ್ ನಡಾಲ್ ಹಾಗೂ ಸೆರೆನಾ ವಿಲಿಯಮ್ಸ್ ಸಹಿತ ಹಲವು ಟೆನಿಸ್ ತಾರೆಯರು ಸಜ್ಜಾಗಿದ್ದಾರೆ. 10.3 ಮಿಲಿಯನ್ಗೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಸಂಭವಿಸಿದ ಕಾಡ್ಗಿಚ್ಚಿನ ದುರಂತದಲ್ಲಿ 26 ಮಂದಿ ಸಾವನ್ನಪ್ಪಿದ್ದರೆ, ಅಂದಾಜು 500 ಮಿಲಿಯನ್ಗೂ ಅಧಿಕ ಪ್ರಾಣಿಗಳು ಪ್ರಾಣ ಬಿಟ್ಟಿವೆ. ಹಾಗೂ 1000ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿವೆ. ಜ.15ರಂದು ರಾಡ್ ಲಾವೆರ್ ಅರೆನಾದಲ್ಲಿ ಎರಡೂವರೆ ಗಂಟೆಗಳ ಕಾಲ ನಡೆಯುವ ಟೂರ್ನಿಯಲ್ಲಿ ನಿಧಿ ಸಂಗ್ರಹ ಕಾರ್ಯ ನಡೆಯಲಿದೆ. ಆಸ್ಟ್ರೇಲಿಯನ್ ಓಪನ್ ಟೂರ್ನಿಯು ಜ.20ರಿಂದ ಆರಂಭವಾಗಲಿದೆ.
Next Story