ಖೇಲೊ ಇಂಡಿಯಾ ಗೇಮ್ಸ್ ; ಅಗ್ರಸ್ಥಾನದಲ್ಲಿ ಮಹಾರಾಷ್ಟ್ರ
ಗುವಾಹಟಿ, ಜ.15: ಖೇಲೊ ಇಂಡಿಯಾ ಗೇಮ್ಸ್ನ ಪದಕ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಬುಧವಾರ ಸ್ಪರ್ಧೆಯಲ್ಲಿದ್ದ 17 ಚಿನ್ನದ ಪದಕಗಳ ಪೈಕಿ ಅಸ್ಸಾಂ ಆರು ಚಿನ್ನ ಜಯಿಸಿದರೆ, ಪಶ್ಚಿಮಬಂಗಾಳ ಮೂರು ಚಿನ್ನದ ಪದಕ ಗೆದ್ದುಕೊಂಡಿದೆ. ಮಹಾರಾಷ್ಟ್ರ ಹಾಗೂ ಹರ್ಯಾಣ ತಲಾ 2 ಪದಕ ಜಯಿಸಿದವು. ಮಹಾರಾಷ್ಟ್ಟ್ರ 28 ಚಿನ್ನದ ಪದಕ ಸಹಿತ ಒಟ್ಟು 110 ಪದಕಗಳನ್ನು ಜಯಿಸಿದರೆ, ಹರ್ಯಾಣ 73 ಪದಕಗಳ ಸಹಿತ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದ ಪೂಜಾ ಬಬನ್ ಬಾಲಕಿಯರ ಅಂಡರ್-17 ಸ್ಪರ್ಧೆಯಲ್ಲಿ 4ನೇ ಚಿನ್ನ ಜಯಿಸಿದರು.
Next Story