ಮೊದಲ ಸುತ್ತಿನಲ್ಲೇ ಎಡವಿದ ಸುಮಿತ್
ಆಸ್ಟ್ರೇಲಿಯನ್ ಓಪನ್ ಕ್ವಾಲಿಫೈಯರ್
ಮೆಲ್ಬೋರ್ನ್, ಜ.16: ಭಾರತದ ಉದಯೋನ್ಮುಖ ಆಟಗಾರ ಸುಮಿತ್ ನಗಾಲ್ ಆಸ್ಟ್ರೇಲಿಯನ್ ಓಪನ್ನ ಪುರುಷರ ಸಿಂಗಲ್ಸ್ ಕ್ವಾಲಿಫೈಯರ್ನಲ್ಲಿ ಗುರುವಾರ ಮೊದಲ ಸುತ್ತಿನಲ್ಲೇ ನೇರ ಸೆಟ್ಗಳಿಂದ ಸೋಲನುಭವಿಸಿ ನಿರ್ಗಮಿಸಿದರು. ಇಲ್ಲಿ ಒಂದು ಗಂಟೆ ಹಾಗೂ 28 ನಿಮಿಷಗಳ ಕಾಲ ನಡೆದ ಸ್ಪರ್ಧೆಯಲ್ಲಿ 21ನೇ ಶ್ರೇಯಾಂಕದ ನಗಾಲ್ರಿಗೆ ಈಜಿಪ್ಟ್ನ ಮುಹಮ್ಮದ್ ಸಫ್ವಾತ್ 7-6(2), 6-2 ಸೆಟ್ಗಳ ಅಂತರದಿಂದ ಸೋಲುಣಿಸಿ ನಿರ್ಗಮನ ಹಾದಿ ತೋರಿಸಿದರು.
ಪುರುಷರ ಸಿಂಗಲ್ಸ್ನಲ್ಲಿ ಎರಡನೇ ಸುತ್ತಿಗೆ ತೇರ್ಗಡೆಯಾಗಿರುವ ಪ್ರಜ್ಞೇಶ್ ಗುಣೇಶ್ವರನ್ ಟೂರ್ನಿಯಲ್ಲಿ ಸ್ಪರ್ಧೆಯಲ್ಲಿರುವ ಏಕೈಕ ಭಾರತೀಯನಾಗಿದ್ದಾರೆ. ರಾಮಕುಮಾರ ರಾಮನಾಥನ್ ಹಾಗೂ ಮಹಿಳಾ ಸಿಂಗಲ್ಸ್ ಕ್ವಾಲಿಫೈಯರ್ನ ಏಕೈಕ ಸ್ಪರ್ಧಿ ಅಂಕಿತಾ ರೈನಾ ಈಗಾಗಲೇ ಸೋತು ಹೊರ ನಡೆದಿದ್ದಾರೆ.
Next Story