ಪಿ.ವಿ.ಸಿಂಧು ಇಂಡೋನೇಶ್ಯ ಮಾಸ್ಟರ್ಸ್ ನಿಂದ ಹೊರಕ್ಕೆ
ಜಕಾರ್ತ, ಜ.16: ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಅವರು ಇಂಡೋನೇಶ್ಯ ಮಾಸ್ಟರ್ಸ್ನ ಮಹಿಳೆಯರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ನಲ್ಲಿ ಗುರುವಾರ ಸೋಲು ಅನುಭವಿಸಿದ್ದಾರೆ. ಪಿ.ವಿ.ಸಿಂಧು ಅವರು ಜಪಾನ್ನ ಸಯಾಕ ಟಕಾಹಾಶಿ ವಿರುದ್ಧ 21-16, 16-21, 19-21 ಅಂತರದಲ್ಲಿ ಸೋಲು ಅನುಭವಿಸಿದರು.
ಒಂದು ಗಂಟೆ 6 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಸಿಂಧು ಸೋತು ನಿರ್ಗಮಿಸಿದರು. 14ನೇ ಶ್ರೇಯಾಂಕಿತೆ ಟಕಾಹಾಶಿ ವಿರುದ್ಧ ಸಿಂಧು 4-2 ಹೆಡ್ ಟು ಹೆಡ್ ದಾಖಲೆ ಹೊಂದಿದ್ದರು.
ಟಕಾಹಾಶಿ ಅವರು ಭಾರತದ ಸೈನಾ ನೆಹ್ವಾಲ್ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಟಕಾಹಾಶಿ ವಿರುದ್ಧ ಸೈನಾ ಸೋಲು ಅನುಭವಿಸಿದ್ದರು. ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚು ಪಡೆದ ಸೈನಾ ಕಳೆದ ವಾರ ಮಲೇಶ್ಯ ಮಾಸ್ಟರ್ಸ್ ನ ಕ್ವಾರ್ಟರ್ ಫೈನಲ್ನಲ್ಲಿ ನಿರ್ಗಮಿಸಿದ್ದರು. ಮಿಕ್ಸೆಡ್ ಡಬಲ್ಸ್ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ ಅವರು ದಕ್ಷಿಣ ಕೊರಿಯಾದ ಕೊ ಸುಂಗ್ ಹ್ಯೂನ್ ಮತ್ತು ಯೆಮ್ ಹೈ ವಾನ್ ವಿರುದ್ಧ ಸೋತು ನಿರ್ಗಮಿಸಿದ್ದಾರೆ.
Next Story