ಆಸ್ಟ್ರೇಲಿಯ ಕಾಡ್ಗಿಚ್ಚು: ಪರಿಹಾರ ನಿಧಿ ಸಂಗ್ರಹಿಸಲು ಹಾಕಿ ಇಂಡಿಯಾ ನೆರವು
ಹೊಸದಿಲ್ಲಿ, ಜ.17: ಆಸ್ಟ್ರೇಲಿಯದಲ್ಲಿ ಕಾಣಿಸಿಕೊಂಡ ಭೀಕರ ಕಾಡ್ಗಿಚ್ಚಿಗೆ ಹಲವು ಜೀವಚರಗಳು, ಹಲವಾರು ಮನೆಗಳು, ಲೆಕ್ಕವಿಲ್ಲದ್ದಷ್ಟು ಪ್ರಾಣಿಗಳು ನಾಶವಾಗಿದ್ದು ಕಾಡ್ಗಿಚ್ಚಿ ನಿಂದ ಸಂತ್ರಸ್ತರಾಗಿರುವವರಿಗೆ ಪರಿಹಾರ ಧನ ಸಂಗ್ರಹಿಸಲು ಹಾಕಿ ಇಂಡಿಯಾ ನೆರವಿನ ಹಸ್ತ ಚಾಚಿದೆ.
ಭಾರತದ ಹಾಕಿ ಆಡಳಿತ ಮಂಡಳಿಯು ಭಾರತೀಯ ತಂಡದ ಹಸ್ತಾಕ್ಷರವಿರುವ ಜರ್ಸಿಗಳನ್ನು ಆಸ್ಟ್ರೇಲಿಯಕ್ಕೆ ಕಳುಹಿಸಿಕೊಟ್ಟಿದೆ. ಇವುಗಳನ್ನು ಹರಾಜಿಗಿಟ್ಟು ಹಣ ಸಂಗ್ರಹಿಸಲಾಗುತ್ತದೆ. ಹಾಕಿ ಇಂಡಿಯಾ ರೆಡ್ ಕ್ರಾಸ್ ಕಾಡ್ಗಿಚ್ಚು ಮನವಿಗೆ 25,000 ಡಾಲರ್ ದೇಣಿಗೆಯನ್ನು ನೀಡಿದೆ. ಹಾಕಿ ಆಸ್ಟ್ರೇಲಿಯದ ಅಧ್ಯಕ್ಷ ಮೆಲಾನೀ ವೂಸ್ನಾಮ್ ಹಾಗೂ ಸಿಇಒ ಮ್ಯಾಟ್ ಫ್ಯಾವಿಯೆರ್ ಹಾಕಿ ಇಂಡಿಯಾದ ಅಧ್ಯಕ್ಷ ಮುಷ್ತಾಕ್ ಅಹ್ಮದ್ಗೆ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ.
Next Story