ಆಸ್ಟ್ರೇಲಿಯನ್ ಓಪನ್ ಕ್ವಾಲಿಫೈಯರ್ನಿಂದ ಪ್ರಜ್ಞೇಶ್ ಔಟ್
ಮೆಲ್ಬೋರ್ನ್, ಜ.17: ಭಾರತದ ಅಗ್ರ-ರ್ಯಾಂಕಿನ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಆಸ್ಟ್ರೇಲಿಯನ್ ಓಪನ್ನ ಪುರುಷರ ಸಿಂಗಲ್ಸ್ ನ ಪ್ರಧಾನ ಸುತ್ತಿಗೆ ತೇರ್ಗಡೆಯಾಗಲು ವಿಫಲರಾಗಿದ್ದಾರೆ. ಶುಕ್ರವಾರ ನಡೆದ ಅಂತಿಮ ಸುತ್ತಿನ ಕ್ವಾಲಿಫೈಯರ್ನಲ್ಲಿ ಲಾಟ್ವಿಯದ ಎರ್ನೆಸ್ಟ್ ಗುಲ್ಬಿಸ್ ವಿರುದ್ಧ ಪ್ರಜ್ಞೇಶ್ ನೇರ ಸೆಟ್ಗಳಿಂದ ಸೋತಿದ್ದಾರೆ. ವಿಶ್ವದ 122ನೇ ರ್ಯಾಂಕಿನ ಆಟಗಾರ ಪ್ರಜ್ಞೇಶ್ 17ನೇ ಶ್ರೇಯಾಂಕದ ಗುಲ್ಬಿಸ್ ವಿರುದ್ಧ 6-7(2), 2-6 ಸೆಟ್ಗಳ ಅಂತರದಿಂದ ಸೋತಿದ್ದಾರೆ. ಪ್ರಜ್ಞೇಶ್ ಸ್ಥಳೀಯ ಆಟಗಾರ ಹ್ಯಾರಿ ಬೌರ್ಚಿಯರ್ ಹಾಗೂ ಜರ್ಮನಿಯ ಯಾನ್ನಿಕ್ ಹ್ಯಾನ್ಫ್ಮನ್ರನ್ನು ಸೋಲಿಸಿದ್ದರು. ರಾಮಕುಮಾರ ರಾಮನಾಥನ್ ಮಂಗಳವಾರ ಮೊದಲ ಸುತ್ತಿನ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತು ನಿರ್ಗಮಿಸಿದ್ದರು. ಮಹಿಳಾ ಸಿಂಗಲ್ಸ್ ಕ್ವಾಲಿಫೈಯರ್ ಅಂಕಿತಾ ರೈನಾ ಕೂಡ ಬೇಗನೆ ಹೊರ ನಡೆದಿದ್ದಾರೆ.
Next Story