ಹೊಬರ್ಟ್ ಡಬ್ಲ್ಯುಟಿಎ ಟೆನಿಸ್ ಟೂರ್ನಿ: ಸಾನಿಯಾಗೆ ಡಬಲ್ಸ್ ಪ್ರಶಸ್ತಿ
ಹೊಬರ್ಟ್, ಜ.18: ಆಸ್ಟ್ರೇಲಿಯದ ಹೊಬರ್ಟ್ನಲ್ಲಿ ಶನಿವಾರ ನಡೆದ ಡಬ್ಲುಟಿಎ ಮಹಿಳಾ ಟೆನಿಸ್ ಟೂರ್ನಮೆಂಟ್ನಲ್ಲಿ ಸಾನಿಯಾ ಮಿರ್ಝಾ ಡಬಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಉಕ್ರೇನ್ನ ನಾಡಿಯಾ ಕಿಚೆನೊಕ್ರೊಂದಿಗೆ ಶನಿವಾರ ಮಹಿಳೆಯರ ಡಬಲ್ಸ್ನ ಫೈನಲ್ ಪಂದ್ಯವನ್ನು ಆಡಿದ ಸಾನಿಯಾ ಚೀನಾದ ಎರಡನೇ ಶ್ರೇಯಾಂಕದ ಝಾಂಗ್ ಶುಐ ಹಾಗೂ ಪೆಂಗ್ ಶುಐ ಅವರನ್ನು 6-4, 6-4 ನೇರ ಸೆಟ್ಗಳಿಂದ ಮಣಿಸುವುದರೊಂದಿಗೆ 275,000 ಯುಎಸ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿದರು.
ಎರಡು ವರ್ಷಗಳ ಬಳಿಕ ವೃತ್ತಿಪರ ಟೆನಿಸ್ಗೆ ವಾಪಸಾದ ಸಾನಿಯಾ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು.
Next Story