ನಾಯಕರಾಗಿ 5 ಸಾವಿರ ರನ್ ಪೂರ್ಣಗೊಳಿಸಿದ ಕೊಹ್ಲಿ
ಬೆಂಗಳೂರು, ಜ.19: ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕರಾಗಿ ಏಕದಿನ ಕ್ರಿಕೆಟ್ನಲ್ಲಿ 5,000 ರನ್ ಪೂರ್ಣಗೊಳಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ ನಾಯಕರಾಗಿ 82ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 127ನೇ ಪಂದ್ಯದಲ್ಲಿ, ಆಸ್ಟೇಲಿಯದ ರಿಕಿ ಪಾಂಟಿಂಗ್ 131 ಪಂದ್ಯ, ಗ್ರೇಮ್ ಸ್ಮಿತ್ 135 ಮತ್ತು ಸೌರವ್ ಗಂಗುಲಿ 136ನೇ ಪಂದ್ಯದಲ್ಲಿ 5 ಸಾವಿರ ರನ್ಗಳ ಮೈಲುಗಲ್ಲು ತಲುಪಿದರು.
ಶತಕ ವಂಚಿತ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ 3ನೇ ವಿಕೆಟ್ಗೆ 68 ರನ್ಗಳ ಜೊತೆಯಾಟ ನೀಡಿದರು. ಕೊಹ್ಲಿ ಶತಕದ ನಿರೀಕ್ಷೆಯಲ್ಲಿದ್ದರು. ಆದರೆ ಅವರ ಬ್ಯಾಟಿಂಗ್ 89ರಲ್ಲಿ ಕೊನೆಗೊಂಡಿತು. 91 ಎಸೆತಗಳಲ್ಲಿ 8 ಬೌಂಡರಿಗಳ ಸಹಾಯದಿಂದ 89 ರನ್ ಗಳಿಸಿದ ಅವರು ಹೇಝಲ್ವುಡ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಅಯ್ಯರ್ ಔಟಾಗದೆ 44 ರನ್ (35ಎ, 6ಬೌ,1ಸಿ) ಗಳಿಸಿದರು. ಮನೀಷ್ ಪಾಂಡೆ ಔಟಾಗದೆ 8 ರನ್ ಗಳಿಸಿದರು.