ಪೇಸ್, ಒಸ್ಟಾಪೆಂಕೊ ಶುಭಾರಂಭ
ಆಸ್ಟ್ರೇಲಿಯನ್ ಓಪನ್
ಮೆಲ್ಬೋರ್ನ್, ಜ.26: ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಅವರು ಜೆಲೆನಾ ಒಸ್ಟಾಪೆಂಕೊ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ನ ಮಿಶ್ರ ಡಬಲ್ಸ್ನಲ್ಲಿ ಶುಭಾರಂಭ ಮಾಡಿದ್ದಾರೆ. ಇದೇ ವೇಳೆ, ರೋಹನ್ ಬೋಪಣ್ಣ ಕೂಡ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
2017ರ ಫ್ರೆಂಚ್ ಓಪನ್ ಚಾಂಪಿಯನ್ ಪೇಸ್ ಹಾಗೂ ಒಸ್ಟಾಪೆಂಕೊ ಆಸ್ಟ್ರೇಲಿಯದ ಸ್ಟೊರ್ಮ್ ಸ್ಯಾಂಡರ್ಸ್ ಹಾಗೂ ಮಾರ್ಕ್ ಪಾಲ್ಮಾನ್ಸ್ರನ್ನು ಒಂದು ಗಂಟೆ ಹಾಗೂ 27 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 6-7(4), 6-3, 10-6 ಸೆಟ್ಗಳ ಅಂತರದಿಂದ ಮಣಿಸಿದರು.
2020 ನನ್ನ ವೃತ್ತಿಜೀವನದ ಕೊನೆಯ ವರ್ಷ ಎಂದು ಪೇಸ್ ಈಗಾಗಲೇ ಘೋಷಿಸಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯನ್ ಓಪನ್ನಲ್ಲಿ ಪೇಸ್ ಕೊನೆಯ ಬಾರಿ ಸ್ಪರ್ಧಿಸುತ್ತಿದ್ದಾರೆ. ಪೇಸ್-ಒಸ್ಟಾಪೆಂಕೊ ಜೋಡಿ ಮುಂದಿನ ಸುತ್ತಿನಲ್ಲಿ ಅಮೆರಿಕದ ಬೆಥಾನಿ ಮ್ಯಾಟೆಕ್-ಸ್ಯಾಂಡ್ಸ್ ಹಾಗೂ ಬ್ರಿಟನ್ನ ಜಮ್ಮಿ ಮರ್ರೆ ಅವರನ್ನು ಎದುರಿಸಲಿದೆ. ಎರಡನೇ ಸುತ್ತಿನ ಮಿಕ್ಸೆಡ್ ಡಬಲ್ಸ್ ಪಂದ್ಯದಲ್ಲಿ ಬೋಪಣ್ಣ ಹಾಗೂ ಉಕ್ರೇನ್ನ ನಾಡಿಯಾ ಕಿಚನೊಕ್ ಅವರು ನಿಕೊಲ್ ಮೆಲಿಚಾರ್ ಹಾಗೂ ಬ್ರುನೊ ಸೊರೆಸ್ರನ್ನು 6-4, 7-6(4) ಸೆಟ್ಗಳ ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.