ಅಶ್ಲೆ ಬಾರ್ಟಿ ಕ್ವಾರ್ಟರ್ ಫೈನಲ್ ಗೆ
ಮೆಲ್ಬೋರ್ನ್, ಜ.26:ಅಗ್ರ ಶ್ರೇಯಾಂಕಿತೆ, ಆಸ್ಟ್ರೇಲಿಯದ ಅಶ್ಲೆ ಬಾರ್ಟಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ವಿಶ್ವದ ನಂ.1 ಆಟಗಾರ್ತಿ ಬಾರ್ಟಿ ರವಿವಾರ ನಡೆದ ಮಹಿಳೆಯರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಅಮೆರಿಕದ 18ನೇ ಶ್ರೇಯಾಂಕದ ಅಲಿಸನ್ ರಿಸ್ಕೆ ಅವರನ್ನು 6-3, 1-6, 6-4 ನೇರ ಸೆಟ್ಗಳ ಅಂತರದಿಂದ ಮಣಿಸಿದರು.
ಬಾರ್ಟಿ ಮುಂದಿನ ಸುತ್ತಿನಲ್ಲಿ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾರನ್ನು ಎದುರಿಸಲಿದ್ದಾರೆ. ಕಳೆದ ವರ್ಷವೂ ಟೂರ್ನಿಯ ಇದೇ ಹಂತದಲ್ಲಿ ಬಾರ್ಟಿ-ಕ್ವಿಟೋವಾ ಕಾದಾಡಿದ್ದರು. ಆಗ ಕ್ವಿಟೋವಾ ಪಂದ್ಯವನ್ನು ಜಯಿಸಿದ್ದರು. ಇದೀಗ ಬಾರ್ಟಿಗೆ ಕಳೆದ ವರ್ಷದ ಸೋಲಿನ ಸೇಡು ತೀರಿಸಿಕೊಳ್ಳುವ ಅವಕಾಶ ಲಭಿಸಿದೆ. ಅಗ್ರ-10ರಲ್ಲಿ ಆರು ಆಟಗಾರ್ತಿಯರು ಈಗಾಗಲೇ ಟೂರ್ನಿಯಲ್ಲಿ ಸೋತು ನಿರ್ಗಮಿಸಿದ್ದಾರೆ.
ಅಮೆರಿಕದ ಆಟಗಾರ್ತಿ ಅಲಿಸನ್ ಕಳೆದೆರಡು ಮುಖಾಮುಖಿಯಲ್ಲಿ ಬಾರ್ಟಿಯವರನ್ನು ಸೋಲಿಸಿದ್ದರು. ಕಳೆದ ವರ್ಷ ವಿಂಬಲ್ಡನ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಅಲಿಸನ್ಗೆ ಬಾರ್ಟಿ ಸೋತಿದ್ದರು.