ಪಾವ್ಲಚೆಂಕೋವಾ ಕ್ವಾರ್ಟರ್ ಫೈನಲ್ಗೆ ಲಗ್ಗೆ
ಮೆಲ್ಬೋರ್ನ್, ಜ.27: ಮಾಜಿ ಚಾಂಪಿಯನ್ ಆ್ಯಂಜೆಲಿಕ್ ಕೆರ್ಬರ್ ರನ್ನು ಮಣಿಸುವುದರೊಂದಿಗೆ ರಶ್ಯದ ಅನಸ್ಟೇಸಿಯ ಪಾವ್ಲಚೆಂಕೋವಾ ಆಸ್ಟ್ರೇಲಿಯನ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಸೋಮವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಪಾವ್ಲಚೆಂಕೋವಾ ಜರ್ಮನಿಯ 17ನೇ ಶ್ರೇಯಾಂಕದ ಕೆರ್ಬರ್ರನ್ನು 6-7(5), 7-6(4), 6-2 ಸೆಟ್ಗಳ ಅಂತರದಿಂದ ಮಣಿಸಿದರು.
ರಶ್ಯದ 30ನೇ ಶ್ರೇಯಾಂಕದ ಆಟಗಾರ್ತಿ ಪಾವ್ಲಚೆಂಕೋವಾ ಮುಂದಿನ ಸುತ್ತಿನಲ್ಲಿ ಮಾಜಿ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್ ಗಾರ್ಬೈನ್ ಮುಗುರುಝರನ್ನು ಎದುರಿಸಲಿದ್ದಾರೆ. ಮುಗುರುಝ ಸೋಮವಾರ ನಡೆದ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಕಿಕಿ ಬೆರ್ಟೆನ್ ್ಸರನ್ನು 6-3, 6-3 ನೇರ ಸೆಟ್ಗಳ ಅಂತರದಿಂದ ಮಣಿಸಿದ್ದಾರೆ.
Next Story