ಬಾಂಗ್ಲಾದೇಶ ಟೆಸ್ಟ್ಗೆ ಪಾಕ್ ತಂಡ: ಅಶ್ರಫ್, ಆಸಿಫ್ ವಾಪಸ್
ಕರಾಚಿ, ಫೆ.1: ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ರಾವಲ್ಪಿಂಡಿಯಲ್ಲಿ ಮುಂದಿನ ವಾರ ಆಡಲಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯಕ್ಕೆ ಆಲ್ರೌಂಡರ್ ಫಹೀಮ್ ಅಶ್ರಫ್ ಹಾಗೂ ಬಿಲಾಲ್ ಆಸಿಫ್ರಿಗೆ ಕರೆ ನೀಡಿದೆ.
ಪಾಕಿಸ್ತಾನ 80 ಅಂಕಗಳಿಸಿ ಡಬ್ಲುಟಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 10 ವರ್ಷಗಳ ಬಳಿಕ ಸ್ವದೇಶದಲ್ಲಿ ಆತಿಥ್ಯವಹಿಸಿದ್ದ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದೆ.
‘‘ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯವನ್ನು ಗೆದ್ದ ಬಳಿಕ ನಮ್ಮ ಟೆಸ್ಟ್ ತಂಡ ಉತ್ತಮ ಆಯಾಮ ಪಡೆದಿದೆ. ಇದೀಗ ನಮಗೆ ವಿಭಿನ್ನ ಎದುರಾಳಿ ಎದುರಾಗಲಿದ್ದು, ಹೆಚ್ಚು ಬದಲಾವಣೆ ಮಾಡುವುದಿಲ್ಲ’’ ಎಂದು ಮುಖ್ಯ ಕೋಚ್ ಹಾಗೂ ಮುಖ್ಯ ಆಯ್ಕೆಗಾರ ಮಿಸ್ಬಾವುಲ್ ಹಕ್ ಹೇಳಿದ್ದಾರೆ.
ಪಾಕ್ನ ಅಗ್ರ ನಾಲ್ವರು ಬ್ಯಾಟ್ಸ್ ಮನ್ಗಳಾದ ನಾಯಕ ಶಾನ್ ಮಸೂದ್, ಅಬಿದ್ ಅಲಿ, ನಾಯಕ ಅಝರ್ ಅಲಿ ಹಾಗೂ ಬಾಬರ್ ಆಝಂ ಲಂಕಾ ವಿರುದ್ಧ 2ನೇ ಟೆಸ್ಟ್ ನಲ್ಲಿ ಶತಕಗಳನ್ನು ಸಿಡಿಸಿದ್ದರು. 34ರ ಹರೆಯದ ಆಸಿಫ್ 2018ರಲ್ಲಿ ಪಾಕ್ ಪರ ಕೊನೆಯ ಟೆಸ್ಟ್ ಆಡಿದ್ದರು. ಈ ವರ್ಷದ ದೇಶೀಯ ಟೂರ್ನಿಯಲ್ಲಿ 9 ಪಂದ್ಯಗಳಲ್ಲಿ 43 ವಿಕೆಟ್ಗಳನ್ನು ಪಡೆದಿದ್ದಾರೆ.