ಹಿರಿಯ ಕ್ರೀಡಾ ಪತ್ರಕರ್ತ ರಾಜು ಭರತನ್ ನಿಧನ
ಮುಂಬೈ, ಫೆ.7: ಹಿರಿಯ ಜನಪ್ರಿಯ ಕ್ರೀಡಾ ಪತ್ರಕರ್ತ ರಾಜು ಭರತನ್ ಶುಕ್ರವಾರ ದೀರ್ಘಕಾಲದ ಅನಾರೋಗ್ಯದಿಂದಾಗಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಭರತನ್ 42 ವರ್ಷಗಳ ಕಾಲ ‘ಇಲುಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ದಲ್ಲಿ ಕಾರ್ಯನಿರ್ವಹಿಸಿದ್ದರು. ಖುಷ್ವಂತ್ ಸಿಂಗ್, ಎಂ.ವಿ. ಕಾಮತ್, ಪ್ರೀತೀಶ್ ನಂದಿ ಹಾಗೂ ಅನಿಲ್ ಧಾರ್ಕರ್ರಂತಹ ಖ್ಯಾತ ಪತ್ರಕರ್ತರೊಂದಿಗೆ ಕೆಲಸ ಮಾಡಿ, ಸಹಾಯಕ ಸಂಪಾದಕರಾಗಿ ನಿವೃತ್ತಿಯಾಗಿದ್ದರು. ವೀಕ್ಲಿ ಪತ್ರಿಕೆಯ ಜೊತೆ ದೀರ್ಘ ಸಮಯ ಕೆಲಸ ಮಾಡಿದ್ದ ಅವರು ಸ್ಪೋರ್ಟ್ಸ್ ಸ್ಟಾರ್ನಲ್ಲಿ ಅಂಕಣ ಬರಹಗಾರರಾಗಿದ್ದರು
Next Story